October 9, 2026
Friday, October 9, 2026
spot_img

Summer Drink | ಮನೆಯಲ್ಲೇ ಮಾಡಿ ಸವಿಯಿರಿ ಮ್ಯಾಂಗೋ ಮಸ್ತಾನಿ

ಮ್ಯಾಂಗೋ ಮಸ್ತಾನಿ ಬೇಸಿಗೆಯ ಬಿಸಿಲಿಗೆ ತಂಪಾದ, ಸಿಹಿಯಾದ ಮತ್ತು ರಿಚ್ ಡ್ರಿಂಕ್. ಮಾವಿನ ಹಣ್ಣಿನ ಸಿಹಿ ರುಚಿ, ತಣ್ಣನೆಯ ಹಾಲು, ಐಸ್‌ಕ್ರೀಂ ಹಾಗೂ ಡ್ರೈಫ್ರೂಟ್ಸ್ ಸೇರಿ ಈ ಡ್ರಿಂಕ್‌ಗೆ ಸ್ಪೆಷಲ್ ರುಚಿ ನೀಡುತ್ತವೆ. ಮನೆಯಲ್ಲೇ ಸುಲಭವಾಗಿ ಇದನ್ನು ಮಾಡಬಹುದು.

ಬೇಕಾಗುವ ಪದಾರ್ಥಗಳು:

ಮಾವಿನ ಹಣ್ಣು – 2
ತಣ್ಣನೆಯ ಹಾಲು – 2 ಕಪ್
ಸಕ್ಕರೆ – 2 ರಿಂದ 3 ಚಮಚ
ವೆನಿಲ್ಲಾ ಅಥವಾ ಮ್ಯಾಂಗೋ ಐಸ್‌ಕ್ರೀಂ – 2 ಸ್ಕೂಪ್
ಐಸ್ ಕ್ಯೂಬ್‌ಗಳು – 4 ರಿಂದ 5
ಕಾಜು, ಬಾದಾಮಿ, ಪಿಸ್ತಾ – ಸ್ವಲ್ಪ
ಮಾವಿನ ತುಂಡುಗಳು – ಅಲಂಕಾರಕ್ಕೆ
ಚೆರ್ರಿ – 2

ಮಾಡುವ ವಿಧಾನ:
ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ತುಂಡುಗಳಾಗಿ ಕತ್ತರಿಸಿ. ಮಿಕ್ಸಿ ಜಾರ್‌ಗೆ ಮಾವಿನ ತುಂಡುಗಳು, ತಣ್ಣನೆಯ ಹಾಲು, ಸಕ್ಕರೆ ಮತ್ತು ಐಸ್ ಕ್ಯೂಬ್ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ.

ನಂತರ ಗ್ಲಾಸ್‌ಗೆ ಈ ಮಿಶ್ರಣವನ್ನು ಸುರಿದು ಮೇಲೆ ಐಸ್‌ಕ್ರೀಂ ಸ್ಕೂಪ್ ಹಾಕಿ. ಅದರ ಮೇಲೆ ಕಾಜು, ಬಾದಾಮಿ, ಪಿಸ್ತಾ ಹಾಗೂ ಮಾವಿನ ತುಂಡುಗಳನ್ನು ಹಾಕಿ ಅಲಂಕರಿಸಿ.

ತಣ್ಣಗೆ ಸರ್ವ್ ಮಾಡಿದರೆ ಮ್ಯಾಂಗೋ ಮಸ್ತಾನಿ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ಇಷ್ಟಪಟ್ಟು ಕುಡಿಯುವ ಬೇಸಿಗೆಯ ಸ್ಪೆಷಲ್ ಡ್ರಿಂಕ್ ಇದು.

Must Read