ಮೇಷ
ಸಣ್ಣಪುಟ್ಟ ಹಿನ್ನಡೆ ಎದುರಾದೀತು. ಸ್ಥೈರ್ಯ ಕುಂದಬೇಕಾಗಿಲ್ಲ. ಆರ್ಥಿಕ ಉನ್ನತಿ ಕಾದಿದೆ. ಕೌಟುಂಬಿಕ ಭಿನ್ನಮತ ಸೌಹಾರ್ದ ಇತ್ಯರ್ಥ.
ವೃಷಭ
ಮನಬಂದಂತೆ ಖರ್ಚು ಮಾಡದಿರಿ. ವೆಚ್ಚ ಬಿಗಿ ಹಿಡಿಯಿರಿ. ಸಾಂಸಾರಿಕ ಸೌಹಾರ್ದ, ಸಾಮರಸ್ಯ. ವೃತ್ತಿಯಲ್ಲಿ ಅಸಮಾಧಾನ.
ಮಿಥುನ
ಸಕಾಲದಲ್ಲಿ ಕಾರ್ಯ ಮುಗಿಸಿ. ಇತರರ ಜತೆ ವ್ಯವಹಾರದಲ್ಲಿ ವಿನಯ ಇರಲಿ. ದಾರ್ಷ್ಟ್ಯ ವರ್ತನೆ ತೋರದಿರಿ. ಹೊಸ ಸ್ನೇಹ ಮೂಡಬಹುದು.
ಕಟಕ
ಪಾಸಿಟಿವ್ ಚಿಂತನೆ ಇಂದು ಅವಶ್ಯ. ಸಣ್ಣ ವಿಷಯಕ್ಕೂ ಕಳವಳ ಅನಗತ್ಯ. ಅಂತಿಮವಾಗಿ ಎಲ್ಲವೂ ನಿಮಗೆ ಪೂರಕವಾಗಿ ಸಾಗಲಿದೆ.
ಸಿಂಹ
ಆತುರದ ಕ್ರಮ ಬೇಡ. ಯೋಚಿಸಿ ಕಾರ್ಯ ಎಸಗಿ. ಸಣ್ಣ ತಪ್ಪು ದೊಡ್ಡ ಪರಿಣಾಮ ಉಂಟು ಮಾಡಬಹುದು. ಸಹನೆ ಅತಿ ಮುಖ್ಯ.
ಕನ್ಯಾ
ಕೌಟುಂಬಿಕ ಶಾಂತಿ, ಸೌಹಾರ್ದ. ಆದಾಯದಲ್ಲಿ ಹೆಚ್ಚಳ. ಶೇರು ವ್ಯವಹಾರದಲ್ಲಿ ಲಾಭ. ಹೊಸ ಸಂಬಂಧ ಬೆಳೆಯುವ ಸಾಧ್ಯತೆ ಕಾಣುತ್ತಿದೆ.
ತುಲಾ
ಸ್ವಲ್ಪ ಮಟ್ಟಿನ ಅಶಾಂತ ಮನಸ್ಸು. ಆದರೆ ಅದು ದೀರ್ಘ ಕಾಲ ಉಳಿಯದು. ಸಂಜೆ ವೇಳೆ ನಿರಾಳತೆಯ ಅನುಭವ ನಿಮಗಾಗಲಿದೆ.
ವೃಶ್ಚಿಕ
ನಿಮ್ಮ ವ್ಯವಹಾರ ವಿಸ್ತರಿಸುವ ಅವಕಾಶ. ಸೂಕ್ತ ಕ್ರಮ ತೆಗೆದುಕೊಳ್ಳಿ. ಕೌಟುಂಬಿಕ ಪರಿಸರ ಹಿತಕರ. ಯಾವುದೇ ಭಿನ್ನಮತ ಬಾಧಿಸದು.
ಧನು
ಸಾಧನೆಯಿಂದ ಇತರರ ಗಮನ ಸೆಳೆಯುವಿರಿ. ನಿಮ್ಮ ಗುರಿ ತಲುಪಲು ಕಠಿಣ ಪ್ರಯತ್ನ ನಡೆಸಿರಿ. ಆರೋಗ್ಯ ಸಮಸ್ಯೆ ಕಾಡಬಹುದು.
ಮಕರ
ಆಪ್ತರ ಕುರಿತಂತೆ ಅತಿಯಾದ ಪೊಸೆಸಿವ್ ಧೋರಣೆ ಬಿಡಿ. ಅದರಿಂದ ಸಂಬಂಧ ಹಾಳಾದೀತು. ಮೃದುವಾಗಿ ವರ್ತಿಸುವುದು ಒಳಿತು.
ಕುಂಭ
ಕೌಟುಂಬಿಕ ಭಿನ್ನಮತ ಸ್ವಲ್ಪ ಕಾಲ ನಿಮ್ಮ ಮನಸ್ಸು ಉದ್ವಿಗ್ನ ಮಾಡಬಹುದು. ಬಳಿಕ ಅದು ಸರಿಯಾಗಲಿದೆ. ವೃತ್ತಿಯಲ್ಲಿ ಸಾಧನೆ.
ಮೀನ
ಏಳುಬೀಳಿನ ಕುರಿತು ಸಮಚಿತ್ತ ಹೊಂದಿರುವುದು ಅವಶ್ಯ. ಏಕೆಂದರೆ ಇಂದು ನೀವು ಏರುಪೇರು ಎರಡನ್ನೂ ಅನುಭವಿಸುವಿರಿ.



