April 27, 2026
Monday, April 27, 2026
spot_img

IPL | ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 6.3 ಓವರ್​ಗಳಲ್ಲೇ ಗೆದ್ದು ಬೀಗಿದ ಆರ್​ಸಿಬಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.‌

ಡೆಲ್ಲಿ ನೀಡಿದ 76 ರನ್​ಗಳ ಗುರಿಯನ್ನು ಕೇವಲ 6.3 ಓವರ್​ಗಳಲ್ಲಿ ಒಂದು ವಿಕೆಟ್​ ಕಳೆದುಕೊಂಡು ತಲುಪುವ ಮೂಲಕ ಗೆದ್ದ ಆರ್​ಸಿಬಿ ಟೂರ್ನಿಯಲ್ಲಿ 6ನೇ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನ ಭದ್ರವಾಗಿಸಿಕೊಂಡಿತು.

ಆರ್​ಸಿಬಿ ಪರ ಬೆಥೆಲ್ 20 ರನ್ ಗಳಿಸಿ ಔಟಾದರು. ನಂತರ ಬಂದ ದೇವದತ್ ಪಡಿಕ್ಕಲ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. 34 ರನ್ ಗಳಿಸಿದರೆ, ಕೊಹ್ಲಿ ಅಜೇಯ 23 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !