April 28, 2026
Tuesday, April 28, 2026
spot_img

ದಿನಭವಿಷ್ಯ: ನಿಮ್ಮ ಕರ್ತವ್ಯನಿಷ್ಠೆಗೆ ಮೆಚ್ಚುಗೆ ಸಿಗಲಿದೆ, ಆದರೆ ಅತಿಯಾದ ಕೆಲಸವೂ ಬೇಡ

ಮೇಷ
ನಿಮ್ಮ ಕರ್ತವ್ಯನಿಷ್ಠೆ ಎಲ್ಲರ ಮೆಚ್ಚುಗೆಗೆ ಪಾತ್ರ. ಆದರೆ ಬಸವಳಿಯುವಷ್ಟು ಕೆಲಸ ಮಾಡದಿರಿ. ವಿಶ್ರಾಂತಿಯೂ ಇರಲಿ. ಕೌಟುಂಬಿಕ ಸಮಾಧಾನ
ವೃಷಭ
ಹಿರಿಯರಿಂದ ಒತ್ತಡ ಎದುರಿಸುವಿರಿ. ಕೆಲ ವಿಷಯದಲ್ಲಿ ಅತಿಯಾಗಿ ಚಿಂತಿಸಲು ಹೋಗಬೇಡಿ. ಲಘುವಾಗಿ ಪರಿಗಣಿಸಿ. ಹಿತಾಸಕ್ತಿ ಕಾಯ್ದುಕೊಳ್ಳಿ.        
ಮಿಥುನ
ವೃತ್ತಿಯಲ್ಲಿ ನಿಮ್ಮ ಹೊಣೆ ಸರಿಯಾಗಿ ನಿಭಾಯಿಸುವಿರಿ. ಕೆಲ ವಿಷಯದಲ್ಲಿ ನಿಮ್ಮ ಕಾರ್ಯಶೈಲಿ ಬದಲಿಸುವ ಅಗತ್ಯವಿದೆ. ಧನಪ್ರಾಪ್ತಿ.
ಕಟಕ
ಉದ್ಯೋಗದಲ್ಲಿ ಅತೃಪ್ತಿ. ಬದಲಾವಣೆಗೆ ಕಾಲ ಕೂಡಿಬರಲಿದೆ. ಸಾಲ ಪಡೆದಿದ್ದರೆ ಮರುಪಾವತಿ ಸುಲಭವಾಗಲಿದೆ. ಸ್ನೇಹಿತರ ನೆರವು.  
ಸಿಂಹ
ಇಂದು ವೈಫಲ್ಯಕ್ಕೆ ಎದೆಗುಂದಬೇಡಿ. ಇದು ನಿಮ್ಮ ಮಂತ್ರವಾಗಲಿ. ಸತತ ಪಯತ್ನದಿಂದ ಯಶ ಸಾಽಸುವಿರಿ. ಆಪ್ತರ  ಜತೆ ಮುನಿಸು ನಿವಾರಣೆ.  
ಕನ್ಯಾ
ಅಭಿವೃದ್ಧಿಯ ಪಥ ನಿಮ್ಮ ಮುಂದಿದೆ. ಎಡವದೆ ಮುಂದರಿಯಿರಿ. ಆಪ್ತರ ಜತೆ ತುಸು ಕಾಲ ಕಳೆಯಿರಿ. ಅವರನ್ನು ಕಡೆಗಣಿಸಬೇಡಿ.        
ತುಲಾ
ಉತ್ಸಾಹದ ದಿನ. ಉದ್ದೇಶಿತ ಕಾರ್ಯ ಸ-ಲ. ನಿಮ್ಮ ನೇರ ಮಾತು ಕೆಲವರಿಗೆ ಅಸಮಾಧಾನ ತಂದೀತು. ಮೆದು ಮಾತು ಒಳಿತು.  
ವೃಶ್ಚಿಕ
ಹೊಸ ಸವಾಲು. ಮಾನಸಿಕ ಅಸಹನೆ. ಕುಟುಂಬ ಸದಸ್ಯರ ಸಂಗದಲ್ಲಿ ಸಮಾಧಾನ. ನಿರ್ಧಾರದಲ್ಲಿ ಅನಿಶ್ಚಿತತೆ ಬೇಡ, ದೃಢತೆಯಿರಲಿ.   ಧನು
ಆಪ್ತರ ಸಂಗದಲ್ಲಿ ಕಾಲ ಕಳೆಯಿರಿ. ನಿಮ್ಮ ನೋವು, ಸಂಕಷ್ಟ ಮರೆಯಲು ಇದು ಸಹಕಾರಿ. ಬಂಧುಮಿತ್ರರ ಅಸಹಕಾರ ಎದುರಿಸುವಿರಿ.     ಮಕರ
ವೃತ್ತಿ ಸಂಬಂಽತ ವಿಷಯವನ್ನು ತಾಳ್ಮೆ ಯಿಂದ ನಿಭಾಯಿಸಿ. ಬಿಕ್ಕಟ್ಟು ನಿವಾರಿಸಲು ವಿಳಂಬ ಮಾಡಬೇಡಿ. ಕ್ಷಿಪ್ರ ನಿರ್ಧಾರ ಅವಶ್ಯ.        
ಕುಂಭ
ದಂಪತಿಗಳು ಹಳೆಯ ವಿಚಾರ ಬಿಟ್ಟು ವ್ಯವಹರಿಸಿ. ಕಲಹ ಶಮನಕ್ಕೆ ಇದು ಅಗತ್ಯ. ವೃತ್ತಿಯಲ್ಲಿ ಕೆಲವರ ಟೀಕೆ ಎದುರಾಗಬಹುದು.    
 ಮೀನ
 ಕೌಟುಂಬಿಕವಾಗಿ ಸಮಾಧಾನಕರ ಸ್ಥಿತಿ. ಆರೋಗ್ಯಕ್ಕೆ ಗಮನ ಕೊಡಿ. ನೆಗೆಟಿವ್ ಚಿಂತನೆ ಬದಿಗಿಡಿ. ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !