October 5, 2026
Monday, October 5, 2026
spot_img

ಮೂರು ಕೋಟಿ ರೂಪಾಯಿ ಅಲಿಮನಿ ನೀಡಲಾರದೇ ಮಹಡಿಯಿಂದ ಹಾರಿದ ಟೆಕ್ಕಿ: ಇದು ಕೊಲೆಯಾ? ಆತ್ಮಹತ್ಯೆಯಾ?!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿ ಸಮೀಪದ ನೋಯ್ಡಾದಲ್ಲಿರುವ ಸೂಪರ್ನೋವಾ ಅತಿ ಎತ್ತರದ ಬಹುಮಹಡಿ ಕಟ್ಟಡದಿಂದ ವ್ಯಕ್ತಿಯೊಬ್ಬರು ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿ ಹಾರುವ ವಿಡಿಯೋ ವೈರಲ್‌ ಆಗಿತ್ತು.

ಇದೀಗ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು ಆತ್ಮಹತ್ಯೆಯೇ ಅಲ್ಲ, ಸಮಾಜದ ವ್ಯವಸ್ಥಿತ ಕೊಲೆ ಎಂದು ಹಲವರು ಆರೋಪಿಸಿದ್ದಾರೆ. ೪೩ನೇ ಕಟ್ಟಡದಿಂದ ಹಾರಿ ಪ್ರಾಣಬಿಟ್ಟ ಸಂಭವ್‌ ಜೈನ್‌ ಕಥೆಯೇನು? ಇಲ್ಲಿದೆ ಸಂಪೂರ್ಣ ಮಾಹಿತಿ..

ನೊಯ್ಡದಾ ಕಂಪನಿಯಲ್ಲಿ ಉತ್ತಮ ನೌಕರಿಯಲ್ಲಿದ್ದ ಸಂಭವ್‌ ಜೈನ್‌ ಸಾವಿಗೆ ಅಲಿಮೊನಿ ಕಾರಣ ಎಂದು ಹೇಳಲಾಗಿದೆ. ಹೌದು, ಸಂಭವ್‌ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಪ್ರೀ ಮೆಚ್ಯೂರ್‌ ಆಗಿ ಹುಟ್ಟಿದ ಮಗುವಿದ್ದ ಕಾರಣ ಪದೇ ಪದೆ ಆರೋಗ್ಯ ಸಮಸ್ಯೆ ಬಾಧಿಸುತ್ತಿತ್ತು. ಸಂಭವ್‌ ಮಗುವಿನ ಚಿಕಿತ್ಸೆಗಾಗಿ ಒಂದು ಕೋಟಿ ರೂಪಾಯಿಯಷ್ಟು ಹಣ ವ್ಯಯಿಸಿದ್ದರು. ಇದಾದ ನಂತರ ಸಂಭವ್‌ ಪತ್ನಿ ಡಿವೋರ್ಸ್‌ ನೀಡಿ ಮೂರು ಕೋಟಿ ರೂಪಾಯಿ ಅಲಿಮನಿ ಕೇಳಿದ್ದರು.

ಸಂಭವ್‌ ತನ್ನ ತಂದೆಯ ಹಣದಿಂದ ಒಂದು ಕೋಟಿ ರೂಪಾಯಿ ನೀಡಿದ್ದರು. ಪತ್ನಿಯನ್ನು ಬೇಡಿಕೊಂಡು ಇನ್ನು ಹಣ ನೀಡಲು ಆಗುವುದಿಲ್ಲ, ಮಗುವಿನ ಮೇಲೆ ಹಣ ಖರ್ಚು ಮಾಡಿದ ಸಾಲ ನನ್ನ ತಲೆಯ ಮೇಲೆಯೇ ಇದೆ ಎಂದು ಕೇಳಿದ್ದರು. ಆದರೆ ಪತ್ನಿಒಪ್ಪಿರಲಿಲ್ಲ. ತನಗೆ ಹಣ ಬೇಕೇ ಬೇಕೆಂದು ಪಟ್ಟು ಹಿಡಿದಿದ್ದಳು. ಇದರಿಂದ ಸಂಭವ್‌ ಬೇಸತ್ತಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ಸಂಭವ್‌ ತನ್ನ ತಂದೆಗೆ ಹಲವು ಬಾರಿ ಕರೆ ಮಾಡಿದ್ದರು ಎನ್ನಲಾಗಿದೆ. ಸಾಯುವ ಮುನ್ನ ಅಪ್ಪಾ ಇನ್ನೆಂದೂ ನೀವು ನನ್ನಿಂದಾಗಿ ಆಕೆಗೆ ಹಣ ನೀಡಬೇಕಿಲ್ಲ ಎನ್ನುವ ಸಂದೇಶವನ್ನು ನೀಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಒಂದು ರೂಪಾಯಿ ವರದಕ್ಷಿಣೆ, ಬಂಗಾರ, ಗಾಡಿ ಏನನ್ನೂ ಕೇಳದೇ ಮದುವೆಯಾಗುವ ಹುಡುಗನಿಂದ ಅಲಿಮೊನಿ ಹೆಸರಿನಲ್ಲಿ ಇಷ್ಟೊಂದು ಹಣ ಪೀಕಿದರೆ ಹುಡುಗರು ಮದುವೆ ಆಗುವುದಕ್ಕೂ ಭಯಪಡುತ್ತಾರೆ. ಭಾರತದಲ್ಲಿ ಅಲಿಮನಿ ಕುರಿತಾಗಿಯೂ ಇನ್ನಷ್ಟು ಆಲೋಚನೆ ಮಾಡುವ ಅಗತ್ಯವಿದೆ. ತಲೆಯ ಮೇಲಿರುವ ಸಾಲದ ಜೊತೆ ಒಂದು ಕೋಟಿ ಹಣ ನೀಡಲಾರದೇ ಮಗುವನ್ನು ಬಿಟ್ಟು ತಂದೆ ಬಾರದ ಲೋಕಕ್ಕೆ ಹೋಗಿದ್ದಾರೆ. ಘಟನೆ ನೋಡಿದರೆ ಬೇಸರವಾಗುತ್ತದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

Must Read