June 18, 2026
Thursday, June 18, 2026
spot_img

ಅಂಗಡಿಯಲ್ಲಿ ಸಿಗುವ ಮಸಾಲೆ ಪುಡಿಗಳು, ಅರಿಶಿಣದಲ್ಲಿ ಲೆಡ್‌ ಅಂಶ ಪತ್ತೆ, ಪರೀಕ್ಷೆಗೆ ಸರ್ಕಾರ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಯಲ್ಲಿ ಸಾಂಬಾರ್‌ ಪುಡಿ, ಖಾರದ ಪುಡಿ ಖಾಲಿ ಆದರೆ ಅಂಗಡಿಯಿಂದ ಪ್ಯಾಕೇಟ್‌ ತರೋದು ಮಾಮೂಲಿ. ಈ ಪ್ಯಾಕೇಟ್‌ ಪುಡಿಗಳಲ್ಲಿಯೂ ಲೆಡ್‌ ಅಂಶ ಪತ್ತೆಯಾಗಲಿದೆ.

ಬ್ಯಾಚುಲರ್ಸ್‌ ಯಾವುದೇ ಅಡುಗೆಗಳಿಗೆ ಮಿಕ್ಸಿ ರುಬ್ಬರೋದಿಲ್ಲ. ಅಂಗಡಿಯಿಂದ ತಂದ ಪುಡಿಗಳನ್ನು ಹಾಕಿ ಅಡುಗೆ ಮಾಡಿಕೊಳ್ತಾರೆ. ಇದೀಗ ಅದರಲ್ಲಿ ಬೇರೆ ಬೇರೆ ಪುಡಿಗಳನ್ನು ಮಿಕ್ಸ್‌ ಮಾಡಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಗೆ ದೂರು ದಾಖಲಾಗಿದೆ.

ಪುಡಿ ಗಟ್ಟಿಯಾಗೋದಕ್ಕೆ ಕಲಬೆರಕೆ ಮಾಡ್ತಿದ್ದಾರೆ ಎಂದು ದೂರು ದಾಖಲಾಗಿದ್ದು, ರಾಜ್ಯಾದ್ಯಂತ ಪುಡಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಯಾವುದೋ ಮರದ ಚಕ್ಕೆ ಅಥವಾ ಹೊಟ್ಟನ್ನು ಪುಡಿಗಳ ಜೊತೆಗೆ ಮಿಕ್ಸ್‌ ಮಾಡಿದ್ದಾರೆ ಎನ್ನಲಾಗಿದೆ. ಈ ರೀತಿ ಪುಡಿಗಳಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಇರುವ ಕಾರಣ ಪರೀಕ್ಷೆಗೆ ಕಳುಹಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !