June 18, 2026
Thursday, June 18, 2026
spot_img

Summer Dessert | ಮನೆಯಲ್ಲೇ ಮಾಡಿ ತಂಪಾದ ‘ನೋ-ಬೇಕ್ ಓರಿಯೊ ಚೀಸ್ ಕೇಕ್’

ಬೇಸಿಗೆಯಲ್ಲಿ ತಂಪಾದ, ಕ್ರೀಮಿ ಮತ್ತು ಸಿಹಿಯಾದ ಡೆಸರ್ಟ್ ತಿನ್ನಬೇಕು ಅನಿಸಿದರೆ ನೋ-ಬೇಕ್ ಓರಿಯೊ ಚೀಸ್ ಕೇಕ್ ಪರ್ಫೆಕ್ಟ್. ಓವನ್ ಬೇಕಾಗಿಲ್ಲ, ಕೆಲವೇ ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ಈ ರಿಚ್ ಡೆಸರ್ಟ್ ತಯಾರಿಸಬಹುದು. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇದು ಫೇವರಿಟ್.

ಬೇಕಾಗುವ ಪದಾರ್ಥಗಳು:

ಓರಿಯೊ ಬಿಸ್ಕೆಟ್ – 25 ರಿಂದ 30
ಕರಗಿಸಿದ ಬೆಣ್ಣೆ – 4 ಚಮಚ
ಕ್ರೀಮ್ ಚೀಸ್ – 400 ಗ್ರಾಂ
ಸಕ್ಕರೆ ಪುಡಿ – ಅರ್ಧ ಕಪ್
ವೆನಿಲ್ಲಾ ಎಸೆನ್ಸ್ – 1 ಚಮಚ
ವಿಪ್ಪಿಂಗ್ ಕ್ರೀಮ್ – 1 ಕಪ್
ಚಾಕೊಲೇಟ್ ಸಿರಪ್ – ಅಲಂಕಾರಕ್ಕೆ
ಓರಿಯೊ ಪುಡಿ – ಟಾಪಿಂಗ್‌ಗೆ

ಮಾಡುವ ವಿಧಾನ:

ಮೊದಲು ಓರಿಯೊ ಬಿಸ್ಕೆಟ್ ಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಅದಕ್ಕೆ ಕರಗಿಸಿದ ಬೆಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕೇಕ್ ಟಿನ್ ಅಥವಾ ಬೌಲ್‌ನ ತಳದಲ್ಲಿ ಒತ್ತಿ ಹಾಕಿ 15 ನಿಮಿಷ ಫ್ರಿಡ್ಜ್‌ನಲ್ಲಿ ಇಡಿ.

ಈಗ ಒಂದು ಬೌಲ್‌ನಲ್ಲಿ ಕ್ರೀಮ್ ಚೀಸ್, ಸಕ್ಕರೆ ಪುಡಿ ಮತ್ತು ವೆನಿಲ್ಲಾ ಎಸೆನ್ಸ್ ಹಾಕಿ ನಯವಾಗಿ ಬೀಟ್ ಮಾಡಿ. ನಂತರ ವಿಪ್ ಮಾಡಿದ ಕ್ರೀಮ್ ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ಸ್ವಲ್ಪ ಓರಿಯೊ ತುಂಡುಗಳನ್ನು ಸೇರಿಸಿದರೆ ಇನ್ನಷ್ಟು ರುಚಿ ಹೆಚ್ಚುತ್ತದೆ.

ಈ ಕ್ರೀಮ್ ಮಿಶ್ರಣವನ್ನು ತಯಾರಿಸಿದ ಬೇಸ್ ಮೇಲೆ ಸುರಿದು ಸಮವಾಗಿ ಹಚ್ಚಿ. ಮೇಲೆ ಓರಿಯೊ ಪುಡಿ ಅಥವಾ ಚಾಕೊಲೇಟ್ ಸಿರಪ್ ಹಾಕಿ ಅಲಂಕರಿಸಿ. ಕನಿಷ್ಠ 5 ರಿಂದ 6 ಗಂಟೆ ಫ್ರಿಡ್ಜ್‌ನಲ್ಲಿ ಸೆಟ್ ಆಗಲು ಬಿಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !