ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದು, ಮತ್ತೊಮ್ಮೆ ಪಾರುಪತ್ಯೆ ಮರೆದಿದೆ.
ಆರಂಭಿಕ ಸುತ್ತಿನ ಪ್ರಕಾರ, ಬಿಜೆಪಿಯು 9,200 ಕ್ಕೂ ಹೆಚ್ಚು ಸ್ಥಾನಗಳ 3,750 ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ರಾಜ್ಯದ 15 ಮಹಾನಗರ ಪಾಲಿಕೆಗಳು, 84 ಪುರಸಭೆಗಳು, 34 ಜಿಲ್ಲಾ ಪಂಚಾಯಿತಿಗಳು ಮತ್ತು 260 ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ ಬಹುತೇಕ ಕಡೆ ಕಮಲ ಅರಳಿದಿದೆ. ಕಾಂಗ್ರೆಸ್ ಹಾಗೂ ಆಪ್ ಗೆ ಭಾರೀ ಹಿನ್ನಡೆಯಾಗಿದೆ.
ಪ್ರಸುತ್ತ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 410 ಸ್ಥಾನಗಳನ್ನುಗೆದ್ದು ಸಂಭ್ರಮಿಸಿದರೆ, ಕಾಂಗ್ರೆಸ್ 20 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇತರರು 4 ಸ್ಥಾನಗಳನ್ನು ಗಳಿಸಿದ್ದಾರೆ.
ಪುರಸಭೆಗಳಲ್ಲಿ, ಬಿಜೆಪಿ 1,105 ಸ್ಥಾನಗಳನ್ನು ಗಳಿಸಿದ್ದು, ಕಾಂಗ್ರೆಸ್ 192 ಸ್ಥಾನ ಮತ್ತು ಇತರರು 1,158 ಸ್ಥಾನಗಳನ್ನು ಗೆದ್ದುಗೊಂಡಿದೆ.
ಜಿಲ್ಲಾ ಪಂಚಾಯತ್‌ಗಳಲ್ಲಿ, ಬಿಜೆಪಿ ಭಾರೀ ಮುನ್ನಡೆ ಸಾಧಿಸಿದ್ದು, 439 ಸ್ಥಾನಗಳನ್ನುತನ್ನದಾಗಿಸಿಕೊಂಡಿದೆ.ಕಾಂಗ್ರೆಸ್ 55 ಸ್ಥಾನಗಳನ್ನು ಪಡೆದರೆ, ಇತರರು 20 ಸ್ಥಾನಗಳನ್ನು ಗೆದ್ದಿದ್ದಾರೆ.
ತಾಲೂಕು ಪಂಚಾಯತ್‌ಗಳಲ್ಲಿ ಬಿಜೆಪಿ 1,803 ಸ್ಥಾನ ಬೀಗಿದ್ದು, ಕಾಂಗ್ರೆಸ್ 409 ಸ್ಥಾನಗ ಮತ್ತು ಇತರರು 194 ಸ್ಥಾನಗಳೊಂದಿಗೆ ಮುಂದಿದ್ದಾರೆ.



