October 7, 2026
Wednesday, October 7, 2026
spot_img

ರಾಜ್ಯದಲ್ಲಿ ರಣಬಿಸಿಲಿನ ರುದ್ರತಾಂಡವ: ಬೀದರ್‌ನಲ್ಲಿ 46°C, ಜನಜೀವನ ತತ್ತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಬೇಸಿಗೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಉರಿ ಬಿಸಿಲಿನಿಂದ ತತ್ತರಿಸುತ್ತಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಚಿಂತಾಕಿ ಪ್ರದೇಶದಲ್ಲಿ 46 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು ಈವರೆಗೆ ರಾಜ್ಯದಲ್ಲಿ ದಾಖಲಾಗಿರುವ ಅತ್ಯಧಿಕ ಮಟ್ಟ ಎಂದು KSNDMC ತಿಳಿಸಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ಭಾಗದಲ್ಲಿ 44°C ಮತ್ತು ಬೆಂಗಳೂರು ನಗರದಲ್ಲಿ 38°C ತಾಪಮಾನ ದಾಖಲಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಹೊಡೆತ ಹೆಚ್ಚಾಗಿದೆ. ಮಧ್ಯಾಹ್ನ 2 ರಿಂದ 3 ಗಂಟೆಯ ನಡುವೆ ತಾಪಮಾನ ಗರಿಷ್ಠ ಮಟ್ಟ ತಲುಪುತ್ತಿದ್ದು, ದೀರ್ಘ ಸಮಯ 40°C ಮೇಲಾಗಿಯೇ ಉಳಿಯುತ್ತಿರುವುದು ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ:

ರಾತ್ರಿ ವೇಳೆಯಲ್ಲೂ ತಾಪಮಾನ ಇಳಿಯದೇ ಕನಿಷ್ಠ 24–25°C ಸುತ್ತಮುತ್ತ ಉಳಿಯುತ್ತಿರುವುದರಿಂದ ಜನರಿಗೆ ನಿದ್ರೆ ಸಮಸ್ಯೆ, ದಣಿವು ಮತ್ತು ಆರೋಗ್ಯ ತೊಂದರೆಗಳು ಎದುರಾಗುತ್ತಿವೆ. ತಜ್ಞರ ಪ್ರಕಾರ ಇದು ಮಾನವ, ಪ್ರಾಣಿ ಮತ್ತು ಕೃಷಿ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ.

Must Read