September 4, 2026
Friday, September 4, 2026
spot_img

ಸಾಕ್ಷಿಗಳ ವಿಚಾರಣೆ ತುಂಬಾ ಟೈಮ್‌ ತಗೋತಿದೆ, ಜಾಮೀನು ಕೊಡಿ ಎಂದು ಅರ್ಜಿ ಹಾಕಿದ ನಟ ದರ್ಶನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನ ಎ2 ಆರೋಪಿ ನಟ ದರ್ಶನ್‌ ಮತ್ತೊಮ್ಮೆ ಜಾಮೀನಿಗೆ ಅರ್ಜಿ ಹಾಕಿದ್ದಾರೆ.

ಸಾಕ್ಷಿಗಳ ವಿಚಾರಣೆ ತುಂಬಾ ಸಮಯ ತೆಗೆದುಕೊಳ್ಳುತಿದೆ ಎಂದು ಹೇಳಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಈ ಹಿಂದೆ ದರ್ಶನ್‌ಗೆ ಕರ್ನಾಟಕ ಹೈ ಕೋರ್ಟ್‌ ಜಾಮೀನು ನೀಡಿತ್ತು. ಅದನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿತ್ತು. ಮತ್ತೆ ಅರೆಸ್ಟ್‌ ಆದ ದರ್ಶನ್‌ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇದ್ದಾರೆ.

ಜೈಲುವಾಸದಿಂದ ಬೇಸತ್ತಿರುವ ದರ್ಶನ್‌ ಜಾಮೀನು ನೀಡಿ ಎಂದು ಮನವಿ ಮಾಡಿದ್ದಾರೆ. ಮುಂದಿನ ವಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !