July 5, 2026
Sunday, July 5, 2026
spot_img

ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಕಮಾಲ್: ಸತತ ಮೂರನೇ ಬಾರಿಗೆ ಅರಳಲಿದೆ ಕಮಲ ಎಂದ ಎಕ್ಸಿಟ್‌ ಪೋಲ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಚರಾಜ್ಯ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಹೊರಬೀಳಲು ಆರಂಭವಾಗಿದ್ದು, ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಕಮಾಲ್ ಮಾಡಲಿದೆ ಎಂದು ತಿಳಿಸಿದೆ.

ಈ ಬಾರಿಯೂ ಅಸ್ಸಾಂ ನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಅಸ್ಸಾಂ ನಲ್ಲಿ ವಿಧಾನಸಭೆಯ ಒಟ್ಟು 126 ಸ್ಥಾನಗಳಲ್ಲಿ ಬಹುಮತಕ್ಕೆ 63 ಸ್ಥಾನಗಳ ಅಗತ್ಯವಿದೆ.

ಪ್ರಮುಖ ಸಮೀಕ್ಷಾ ಸಂಸ್ಥೆಗಳ ವಿವರ ಇಲ್ಲಿದೆ

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
NDA ಮೈತ್ರಿಕೂಟ: 88 – 100 ಸ್ಥಾನಗಳು
ಕಾಂಗ್ರೆಸ್ ಮೈತ್ರಿಕೂಟ: 24 – 36 ಸ್ಥಾನಗಳು
ಇತರರು: 0

ಮ್ಯಾಟ್ರಿಜ್ ಸಮೀಕ್ಷೆ:
NDA ಮೈತ್ರಿಕೂಟ: 85 – 95 ಸ್ಥಾನಗಳು
ಕಾಂಗ್ರೆಸ್ ಮೈತ್ರಿಕೂಟ : 25 – 32
ಇತರರು: 6 – 12 ಸ್ಥಾನಗಳು

P-Marq ಎಕ್ಸಿಟ್ ಪೋಲ್ – ಅಸ್ಸಾಂ
NDA ಮೈತ್ರಿಕೂಟ : 82 – 94
ಕಾಂಗ್ರೆಸ್ ಮೈತ್ರಿಕೂಟ : 30 – 40
ಇತರರು : 01 – 05

JVC ಎಕ್ಸಿಟ್ ಪೋಲ್ – ಅಸ್ಸಾಂ
NDA ಮೈತ್ರಿಕೂಟ : 88 – 101
ಕಾಂಗ್ರೆಸ್ ಮೈತ್ರಿಕೂಟ : 23 – 33
ಇತರರು : 02 – 05

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !