May 2, 2026
Saturday, May 2, 2026
spot_img

ಪಂಜಾಬ್ ವಿಧಾನಸಭೆಗೆ ಕುಡಿದು ಬಂದರೇ ಸಿಎಂ ಭಗವಂತ್ ಮಾನ್? ಡೋಪಿಂಗ್ ಟೆಸ್ಟ್‌ಗೆ ವಿಪಕ್ಷಗಳ ಆಗ್ರಹ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್ ವಿಧಾನಸಭೆಯಲ್ಲಿ ಇಂದು ಹೈಡ್ರಾಮಾವೇ ನಡೆದಿದ್ದು, ಮುಖ್ಯಮಂತ್ರಿ ಭಗವಂತ್ ಮಾನ್ ಸದನಕ್ಕೆ ಮದ್ಯಪಾನ ಮಾಡಿ ಬಂದಿದ್ದಾರೆ ಎಂದು ವಿರೋಧ ಪಕ್ಷಗಳು ಗಂಭೀರವಾಗಿ ಆರೋಪವನ್ನೇ ಮಾಡಿದ್ದಾರೆ.

ಹೀಗಾಗಿ ಮುಖ್ಯಮಂತ್ರಿ ಮಾನ್ ಸಹಿತ ಎಲ್ಲಾ ಶಾಸಕರು ಕುಡಿದು ಸದನಕ್ಕೆ ಬಂದಿದ್ದು, ಎಲ್ಲರನ್ನು ಡೋಪ್ ಟೆಸ್ಟ್ ನಡೆಸಬೇಕು ಎಂದು ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಒತ್ತಾಯಿಸಿದ್ದಾರೆ.

ಇಂದು ವಿಶೇಷ ಅಧಿವೇಶನದ ವೇಳೆ ಕಾಂಗ್ರೆಸ್ ಶಾಸಕರೊಬ್ಬರು ಮುಖ್ಯಮಂತ್ರಿ ಮಾನ್ ಮದ್ಯದ ಅಮಲಿನಲ್ಲಿ ಸದನಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು. ಇದರ ಬೆನ್ನಲ್ಲೇ ಈ ವಿಚಾರವಾಗಿ ಪ್ರತಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಈ ಕುರಿತು ಸತ್ಯಾಸತ್ಯತೆ ತಿಳಿಯಲು ಮುಖ್ಯಮಂತ್ರಿ ಮತ್ತು ಎಲ್ಲಾ ಶಾಸಕರನ್ನು ಮದ್ಯಪಾನ ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಇತ್ತ ಆಮ್ ಆದ್ಮಿ ಪಾರ್ಟಿ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ್ದ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಅವರು ಕೂಡ ಭಗವಂತ್ ಮಾನ್ ವಿರುದ್ಧ ಆಕ್ರೋಶ ಹಾಕಿದ್ದು, ಮತ್ತೆ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಗೆ ಕುಡಿದು ಬಂದಿದ್ದಾರೆ. ಈ ವ್ಯಕ್ತಿ ಗುರುದ್ವಾರ, ದೇವಾಲಯಗಳಿಗೆ ಕುಡಿದು ಹೋಗುತ್ತಾರೆ, ಲೋಕಸಭೆಗೂ ಕುಡಿದು ಬರುತ್ತಿದ್ದರು ಮತ್ತು ಈ ಹಿಂದೆ ವಿದೇಶದಲ್ಲಿ ಅತಿಯಾಗಿ ಮದ್ಯಪಾನ ಮಾಡಿದ್ದರಿಂದ ವಿಮಾನದಿಂದ ಕೆಳಗಿಳಿಸಲಾಗಿತ್ತು. ಇದೀಗ ವಿಧಾನಸಭೆಯಲ್ಲಿ ಇಂತಹ ವರ್ತನೆ ಎಂದು ಟೀಕಿಸಿದ್ದಾರೆ.

ಈ ವೇಳೆ ಆಡಳಿತಾರೂಢ ಎಎಪಿ ಈ ಆರೋಪಗಳನ್ನು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !