ಇಂದಿನ ಜೀವನಶೈಲಿಯಲ್ಲಿ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡೋದು ಸಾಮಾನ್ಯ. ಆಫೀಸ್ ಕೆಲಸವಾಗಲಿ, ಲ್ಯಾಪ್ಟಾಪ್ ಮುಂದೆ ಗಂಟೆಗಟ್ಟಲೆ ಕೂತಿರೋದು ಆಗಲಿ, ದೇಹದ ಚಲನೆ ಕಡಿಮೆ ಆಗುತ್ತಲೇ ಹೋಗುತ್ತದೆ. ಇದರಿಂದ ಸುಸ್ತು, ತೂಕ ಹೆಚ್ಚಾಗೋದು, ಬೆನ್ನು ನೋವು ಮತ್ತು ಎನರ್ಜಿ ಕೊರತೆ ಕಾಣಿಸಬಹುದು. ಆದರೆ ಕೆಲಸ ಕುಳಿತು ಮಾಡ್ತಿದ್ದರೂ ದಿನಪೂರ್ತಿ ಆಕ್ಟಿವ್ ಆಗಿರೋದು ಸಾಧ್ಯ.
- ಒಂದೇ ಜಾಗದಲ್ಲಿ ಎರಡು-ಮೂರು ಗಂಟೆ ಕೂತಿರೋದು ದೇಹಕ್ಕೆ ಒಳ್ಳೆಯದಲ್ಲ. ಪ್ರತಿ ಗಂಟೆಗೆ ಕನಿಷ್ಠ 2 ರಿಂದ 5 ನಿಮಿಷ ಎದ್ದು ನಡೆದಾಡಿ. ಇದರಿಂದ ರಕ್ತ ಸಂಚಾರ ಚೆನ್ನಾಗಿರುತ್ತದೆ.
- ಕಾಲುಗಳನ್ನು ಸ್ಟ್ರೆಚ್ ಮಾಡೋದು, ಭುಜಗಳನ್ನು ತಿರುಗಿಸೋದು, ಕುತ್ತಿಗೆಗೆ ಲೈಟ್ ಮೂವ್ಮೆಂಟ್ ಕೊಡುವುದು — ಇಂತಹ ಸಣ್ಣ ವ್ಯಾಯಾಮಗಳು ದೇಹಕ್ಕೆ ರಿಲೀಫ್ ಕೊಡುತ್ತವೆ.
- ನೀರು ಹೆಚ್ಚು ಕುಡಿದ್ರೆ ದೇಹ ಹೈಡ್ರೇಟ್ ಆಗಿರುತ್ತದೆ. ಜೊತೆಗೆ ನೀರು ಕುಡಿಯೋಕೆ ಎದ್ದು ಹೋಗೋದು ಕೂಡ ಚಿಕ್ಕ ಚಲನೆಯೇ.
- ಕರೆ ಬಂದಾಗ ಒಂದೇ ಜಾಗದಲ್ಲಿ ಕೂತಿರೋದಕ್ಕಿಂತ ನಿಧಾನವಾಗಿ ನಡೆದು ಮಾತನಾಡಿ. ದಿನದ ಸ್ಟೆಪ್ಸ್ ಸಹಜವಾಗಿಯೇ ಹೆಚ್ಚಾಗುತ್ತವೆ.
- ದಿನಪೂರ್ತಿ ಕುಳಿತಿದ್ದರೆ ಸಂಜೆ 20–30 ನಿಮಿಷ ನಡೆದಾಡೋದು ದೇಹವನ್ನು ಮತ್ತೆ ಚುರುಕಾಗಿಸುತ್ತದೆ.



