August 24, 2026
Monday, August 24, 2026
spot_img

ಗ್ಯಾಸ್ ಆಯ್ತು ಮುಂದೆ ಪೆಟ್ರೋಲ್, ಡೀಸೆಲ್: ಇದು ಚುನಾವಣಾ ಮಸೂದೆ ಎಂದು ಟೀಕಿಸಿದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇ 1 ರಿಂದ ಅನ್ವಯವಾಗುವಂತೆ ಕೇಂದ್ರ ಸರಕಾರವು 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ಬರೋಬ್ಬರಿ 993 ರೂಪಾಯಿಗಳಷ್ಟು ಹೆಚ್ಚಿಸಿದ್ದು, ಈ ನಿರ್ಧಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಗ್ಯಾಸ್ ಆಯ್ತು ಮುಂದಿನ ಸರದಿ ಪೆಟ್ರೋಲ್, ಡೀಸೆಲ್. ಇದು ಚುನಾವಣಾ ಮಸೂದೆ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಮೊದಲೇ ನಾನು ಚುನಾವಣೆ ಬಳಿಕ ಜನರಿಗೆ ಹಣದುಬ್ಬರ ಬಿಸಿ ತಟ್ಟಲಿದೆ ಎಂದು ಎಚ್ಚರಿಕೆ ನೀಡಿದ್ದೆ. ಇದೀಗ ಇಂದು ವಾಣಿಜ್ಯ ಅನಿಲ ಸಿಲಿಂಡರ್‌ ಬೆಲೆ 993 ರೂ. ಹೆಚ್ಚಾಗಿದೆ. ಈ ಮೂಲಕ ಒಂದೇ ದಿನದಲ್ಲಿ ಹೆಚ್ಚಾದ ಅತಿದೊಡ್ಡ ಏರಿಕೆಯಾಗಿದೆ. ಇದು ಚುನಾವಣಾ ಮಸೂದೆ ಎಂದು ಟೀಕಿಸಿದ್ದಾರೆ.

ಕೇವಲ ಮೂರು ತಿಂಗಳಲ್ಲಿ ಶೇ. 81ರಷ್ಟು ಹೆಚ್ಚಳವಾಗಿದೆ.ಇದರಿಂದ ಚಹಾ ಅಂಗಡಿಗಳು, ಧಾಬಾ, ಬೇಕರಿಗಳು, ಸಿಹಿತಿಂಡಿ ಅಂಗಡಿಗಳ ಮೇಲೆ ಹೆಚ್ಚು ಹೊರೆ ಬೀಳಲಿದೆ. ಹೀಗೆ ಮುಂದೆ ಆಹಾರ ವೆಚ್ಚಗಳ ಮೇಲೂ ಪರಿಣಾಮ ಬೀರುತ್ತದೆ. ಈಗ ಎಲ್‌ಪಿಜಿ ಗ್ಯಾಸ್ ಬೆಲೆ ಆಯು.ಮುಂದೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !