October 15, 2026
Thursday, October 15, 2026
spot_img

Ice cream | ಬೇಸಿಗೆಯಲ್ಲಿ ತಂಪಾಗಿ ಸವಿಯಿರಿ ಹೆಲ್ದಿ ಕ್ಯಾರೆಟ್ ಐಸ್ ಕ್ರೀಮ್

ಕ್ಯಾರೆಟ್‌ನ ಪೌಷ್ಟಿಕಾಂಶ ಜೊತೆಗೆ ಐಸ್ ಕ್ರೀಮ್‌ನ ಸಿಹಿ ರುಚಿ ಒಂದೇ ಕಡೆ ಸಿಗಬೇಕೆಂದರೆ ಕ್ಯಾರೆಟ್ ಐಸ್ ಕ್ರೀಮ್ ಬೆಸ್ಟ್. ಕ್ಯಾರೆಟ್ ಹಲ್ವಾದ ಸುವಾಸನೆ, ಏಲಕ್ಕಿಯ ರುಚಿ ಮತ್ತು ಕ್ರೀಮಿಯ ಟೆಕ್ಸ್ಚರ್‌ನಿಂದ ಈ ಡೆಸರ್ಟ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ.

ಬೇಕಾಗುವ ಪದಾರ್ಥಗಳು

ಕ್ಯಾರೆಟ್ – 3 ರಿಂದ 4 (ತುರಿದದ್ದು)
ಹಾಲು – 1 ಕಪ್
ಕಂಡೆನ್ಸೆಡ್ ಮಿಲ್ಕ್ – 1/2 ಕಪ್
ಹಾಲಿನ ಕೆನೆ / ವಿಪ್ಡ್ ಕ್ರೀಮ್ – 1 ಕಪ್
ಹಾಲಿನ ಪುಡಿ – 2 ಚಮಚ
ಏಲಕ್ಕಿ ಪುಡಿ – 1/4 ಚಮಚ
ಕೇಸರಿ – ಸ್ವಲ್ಪ (ಐಚ್ಛಿಕ)
ಗೋಡಂಬಿ/ಬಾದಾಮಿ ತುಂಡುಗಳು – ಅಲಂಕಾರಕ್ಕೆ

ಮಾಡುವ ವಿಧಾನ:

ಮೊದಲು ಕ್ಯಾರೆಟ್‌ಗಳನ್ನು ತೊಳೆದು ತುರಿದುಕೊಳ್ಳಿ. ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಕ್ಯಾರೆಟ್‌ನ್ನು 5 ರಿಂದ 7 ನಿಮಿಷ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಸ್ವಲ್ಪ ಹಾಲು ಸೇರಿಸಿ ಮೃದುವಾಗುವವರೆಗೆ ಬೇಯಿಸಿ.

ತಣ್ಣಗಾದ ಬಳಿಕ ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಪ್ಯೂರಿ ಮಾಡಿಕೊಳ್ಳಿ.

ಒಂದು ದೊಡ್ಡ ಬೌಲ್‌ನಲ್ಲಿ ಕ್ಯಾರೆಟ್ ಪ್ಯೂರಿ, ಕಂಡೆನ್ಸೆಡ್ ಮಿಲ್ಕ್, ಹಾಲಿನ ಪುಡಿ, ಏಲಕ್ಕಿ ಪುಡಿ ಮತ್ತು ವಿಪ್ಡ್ ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದರೆ ಕೇಸರಿ ಹಾಕಿ ಮತ್ತಷ್ಟು ಸುವಾಸನೆ ಹೆಚ್ಚಿಸಬಹುದು.

ಈ ಮಿಶ್ರಣವನ್ನು ಏರ್‌ಟೈಟ್ ಡಬ್ಬಿಯಲ್ಲಿ ಹಾಕಿ ಫ್ರೀಜರ್‌ನಲ್ಲಿ 8 ಗಂಟೆ ಅಥವಾ ರಾತ್ರಿಯಿಡೀ ಇಡಿ.

ಗಟ್ಟಿಯಾದ ಬಳಿಕ ಸ್ಕೂಪ್ ಮಾಡಿ, ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ ತಂಪಾಗಿ ಸವಿಯಿರಿ. ಹೆಲ್ತಿ ಮತ್ತು ಟೇಸ್ಟಿ ಕ್ಯಾರೆಟ್ ಐಸ್ ಕ್ರೀಮ್ ಸಿದ್ಧ!

Must Read