July 10, 2026
Friday, July 10, 2026
spot_img

Weight Truth | ಸರಿಯಾಗಿ ಡಯೆಟ್ ಮಾಡ್ತಿದ್ರೂ ತೂಕ ಕಡಿಮೆ ಆಗ್ತಿಲ್ಲ ಅಂದ್ರೆ ಈ ತಪ್ಪು ಮಾಡ್ತಿದ್ದೀರ

ತೂಕ ಕಡಿಮೆ ಮಾಡಬೇಕು ಅನ್ನೋ ಉದ್ದೇಶದಿಂದ ಹಲವರು ಡಯಟ್ ಶುರು ಮಾಡ್ತಾರೆ. ಸಕ್ಕರೆ ಕಡಿಮೆ ಮಾಡ್ತಾರೆ, ಜಂಕ್ ಫುಡ್ ಬಿಡ್ತಾರೆ, ಜಿಮ್‌ಗೂ ಹೋಗ್ತಾರೆ. ಆದ್ರೂ ತೂಕದ ಯಂತ್ರದ ಮೇಲೆ ನಿಂತಾಗ ಸಂಖ್ಯೆಯಲ್ಲಿ ಬದಲಾವಣೆ ಕಾಣಿಸೋದಿಲ್ಲ. ಆಗ “ಇಷ್ಟು ಪ್ರಯತ್ನ ಮಾಡಿದ್ರೂ ಏನೂ ಪ್ರಯೋಜನ ಆಗ್ತಿಲ್ಲ” ಅನ್ನೋ ಬೇಸರ ಶುರುವಾಗುತ್ತದೆ. ಆದರೆ ಕೆಲವೊಮ್ಮೆ ಸಣ್ಣ ಸಣ್ಣ ತಪ್ಪುಗಳೇ ನಿಮ್ಮ ವೆಯಿಟ್ ಲಾಸ್ ಜರ್ನಿಗೆ ಬ್ರೇಕ್ ಹಾಕುತ್ತಿರುತ್ತವೆ.

  • ತೂಕ ಇಳಿಸೋಕೆ ಬಹಳ ಕಡಿಮೆ ತಿನ್ನೋದು ಸರಿಯಾದ ದಾರಿ ಅಲ್ಲ. ದೇಹಕ್ಕೆ ಬೇಕಾದಷ್ಟು ಆಹಾರ ಸಿಗದೇ ಇದ್ದರೆ ಮೆಟಾಬಾಲಿಸಂ ನಿಧಾನವಾಗುತ್ತದೆ. ಇದರಿಂದ ಫ್ಯಾಟ್ ಬರ್ನ್ ಪ್ರಕ್ರಿಯೆಯೂ ಸ್ಲೋ ಆಗಬಹುದು.
  • ಡ್ರೈ ಫ್ರೂಟ್ಸ್, ಪೀನಟ್ ಬಟರ್, ಸ್ಮೂಥಿ, ಗ್ರಾನೋಲಾ ಇವೆಲ್ಲ ಹೆಲ್ತಿಯಾಗಿರಬಹುದು. ಆದರೆ ಪ್ರಮಾಣ ಮೀರಿ ತಿಂದರೆ ಕ್ಯಾಲೊರಿ ಹೆಚ್ಚಾಗಿ ತೂಕ ಇಳಿಯೋದಿಲ್ಲ.
  • ರಾತ್ರಿ ಸರಿಯಾಗಿ ನಿದ್ರೆ ಆಗದಿದ್ದರೆ ಹಸಿವು ನಿಯಂತ್ರಿಸುವ ಹಾರ್ಮೋನ್‌ಗಳು ಅಸ್ತವ್ಯಸ್ತವಾಗುತ್ತವೆ. ಇದರಿಂದ ಹೆಚ್ಚು ತಿನ್ನೋ ಆಸೆ ಹೆಚ್ಚಾಗಬಹುದು.
  • ಜಿಮ್‌ನಲ್ಲಿ ಒಂದು ಗಂಟೆ ಕಷ್ಟಪಟ್ಟರೂ ದಿನದ ಉಳಿದ ಸಮಯ ಕುಳಿತೇ ಇದ್ದರೆ ಒಟ್ಟು ಚಲನೆ ಕಡಿಮೆ ಆಗುತ್ತದೆ. ದಿನಪೂರ್ತಿ ಆಕ್ಟಿವ್ ಆಗಿರೋದು ಕೂಡ ಮುಖ್ಯ.
  • ತೂಕ ಕಡಿಮೆ ಆಗ್ತಿಲ್ಲ ಅಂದ್ರೆ ನಿಮ್ಮ ಪ್ರಯತ್ನ ತಪ್ಪು ಅಂತಲ್ಲ… ಕೆಲವೊಂದು ಸಣ್ಣ ಅಭ್ಯಾಸಗಳನ್ನು ಸರಿಪಡಿಸಿದ್ರೆ ಫಲಿತಾಂಶ ನಿಧಾನವಾಗಿ ಕಾಣಿಸಿಕೊಳ್ಳಲು ಶುರುವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !