August 24, 2026
Monday, August 24, 2026
spot_img

ಐಪಿಎಲ್ ಗೆ ಅವಕಾಶ ಇನ್ನೂ ಸಿಕ್ಕಿಲ್ಲ: 10 ಲಕ್ಷಕ್ಕೆ ಹೊಸ ತಂಡ ಸೇರಿದ ಅರ್ಜುನ್ ತೆಂಡೂಲ್ಕರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನಲ್ಲಿ ಇನ್ನೂ ಕಣಕ್ಕಿಳಿಯದ ಅರ್ಜುನ್ ತೆಂಡೂಲ್ಕರ್‌ಗೆ ಇದೀಗ ಹೊಸ ವೇದಿಕೆ ಸಿಕ್ಕಿದೆ. ಮುಂಬೈ ಟಿ20 ಲೀಗ್ ಹರಾಜಿನಲ್ಲಿ ಯುವ ಆಲ್‌ರೌಂಡರ್ ಅರ್ಜುನ್‌ಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು, ARCS ಅಂಧೇರಿ ತಂಡ 10 ಲಕ್ಷ ರೂ. ನೀಡಿ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ. ಸಚಿನ್ ತೆಂಡೂಲ್ಕರ್ ಪುತ್ರನ ಮುಂದಿನ ಕ್ರಿಕೆಟ್ ಪಯಣದ ಮೇಲೆ ಇದರಿಂದ ಹೊಸ ನಿರೀಕ್ಷೆ ಮೂಡಿದೆ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನಡೆಸಿದ ಹರಾಜಿನಲ್ಲಿ ಮೂಲ ಬೆಲೆಗೆ ಬಂದ ಅರ್ಜುನ್‌ಗೆ ಹಲವು ತಂಡಗಳು ಆಸಕ್ತಿ ತೋರಿದವು. ಕೊನೆಗೆ ಐದು ಪಟ್ಟು ಹೆಚ್ಚು ಮೊತ್ತ ನೀಡಿ ARCS ಅಂಧೇರಿ ಅವರನ್ನು ಖರೀದಿಸಿತು. ಇದೇ ತಂಡ ಯುವ ಬ್ಯಾಟರ್ ಮುಶೀರ್ ಖಾನ್ ಅವರನ್ನೂ 11 ಲಕ್ಷ ರೂ.ಗೆ ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ:

ಪ್ರಸ್ತುತ ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿರುವ ಅರ್ಜುನ್‌ಗೆ ಇನ್ನೂ ಆಡುವ ಅವಕಾಶ ಸಿಕ್ಕಿಲ್ಲ. ಆದರೆ ಮುಂಬೈ ಟಿ20 ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಸಾಮರ್ಥ್ಯ ತೋರಿಸಲು ಇದು ದೊಡ್ಡ ಅವಕಾಶವಾಗಿದೆ. ಈ ಲೀಗ್‌ನಲ್ಲಿ ಅರ್ಜುನ್ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !