ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುದುರೇಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ಸಂಜೆ ಕಾಡ್ಗಿಚ್ಚು ಸಂಭವಿಸಿದ್ದು, ವೇಗವಾಗಿ ಅರಣ್ಯ ಪ್ರದೇಶವನ್ನು ಆವರಿಸಿದೆ.
ಸುಲ್ಕೇರಿಮೊಗ್ರು, ಶಿರ್ಲಾಲು ಗ್ರಾಮದ ಮೇಲ್ಭಾಗದ ಅರಣ್ಯ ಪರಿಸರದಲ್ಲಿ ಬೆಂಕಿಯ ಮಾಲೆ ಕಂಡುಬಂದಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸೇತುವೆಯಿಂದ ಶನಿವಾರ ಸಂಜೆ ಕಂಡು ಬಂದ ದೃಶ್ಯ ಇದಾಗಿದೆ.
ಈ ಕುರಿತು ವನ್ಯಜೀವಿ ವಿಭಾಗದ ಆರ್.ಎಫ್.ಒ. ಶರ್ಮಿಷ್ಠಾ ಅವರು ಮಾಹಿತಿ ನೀಡಿದ್ದು, ಬೆಂಕಿಯ ಪ್ರಮಾಣ ತಹಬದಿಗೆ ಬಂದಿದೆ ಎಂದು ತಿಳಿಸಿದ್ದಾರೆ.



