May 3, 2026
Sunday, May 3, 2026
spot_img

TIPS | ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಕಪ್ಪುಕಲೆಯಾಗಿರುವ ಪಿಗ್ಮೆಂಟೇಶನ್‌ಗೆ ಇಲ್ಲಿದೆ ಮನೆ ಮದ್ದು

ಸಾಮಾನ್ಯಾವಾಗಿ ಎಲ್ಲರಿಗೂ ನಾವು ಚೆನ್ನಾಗಿ ಕಾಣಿಸಬೇಕು ಎಂಬ ಆಸೆ ಇದ್ದೆ ಇರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗಂತು ತಮ್ಮ ಮುಖ ಕಾಂತಿಯುತವಾಗಿರಬೇಕು, ಎಲ್ಲರಿಗೊಂತ ಹೆಚ್ಚು ಚೆನ್ನಾಗಿ ಕಾಣಿಸಿಕೊಳ್ಳಬೇಕೆ ಎಂಬ ಆಸೆ ಇದ್ದೆ ಇರುತ್ತದೆ. ಇತಂಹ ಸಂಧರ್ಭದಲ್ಲಿ ಮುಖದಲ್ಲಿ ಒಂದು ಚಿಕ್ಕ ಕಲೆಯಾದರು ಸಹಿಸುವುದಿಲ್ಲ. ಹಾಗಿರುವಾಗ ತಮ್ಮ ಮುಖದಲ್ಲಿ ಬಂಗು ಅಥವಾ ಪಿಗ್ಮೆಂಟೇಶನ್ ಬಂದರೆ ಹೇಗೆ ಸಹಿಸಿಕೊಳ್ಳುತ್ತಾರೆ. ಅದು ಮುಖ ಸೌಂದರ್ಯವನ್ನೆ ಹಾಳು ಮಾಡಿ ಬಿಡುತ್ತದೆ. ಇದು ಏಕೆ ಬರುತ್ತದೆ. ಇದಕ್ಕೆ ಪರಿಹಾರವೇನು ಎಂಬುದನ್ನು ತಿಳಿಯೋಣ.


ಪಿಗ್ಮೆಂಟೇಶನ್ ಬರಲು ಕಾರಣವೇನು?
ಬಂಗು ಮಧ್ಯವಯಸ್ಕರ ಹಣೆ, ಗಲ್ಲದ ಮೇಲೆ ಬೀಳುವ ಕಪ್ಪು ಕಲೆಯಾಗಿದ್ದು, ಇದು ಚರ್ಮದ ಮೇಲಿನ ಕಲೆ ಅಲ್ಲ, ಇದು ಚರ್ಮದ ಒಳಗಿನ ಕಲೆ. ಬಂಗು ಬರಲು ಕಾರಣ, ಬಿಸಿಲಿಗೆ ಚರ್ಮವನ್ನು ನಿರಂತರವಾಗಿ ಒಡ್ಡಿದರೆ, ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಾದಗ ಅಥವಾ ಕೆಲವೊಮ್ಮೆ ಅನುವಂಶೀಯತೆಯಿಂದಲೂ ಬರಬಹುದು. ಇದು ಮಹಿಳೆಯರಿಗೆ ಅಷ್ಟೇ ಅಲ್ಲ, ಪುರುಷರಲ್ಲಿಯೂ ಕಾಣಿಸಿಕೊಳ್ಳುತ್ತದೆ.


ಪಿಗ್ಮೆಂಟೇಶನ್ ನಿವಾರಣೆಗೆ ಕೆಲವು ಮನೆ ಮದ್ದು
ಈರುಳ್ಳಿ: ವಿಟಮೀನ್‌ ಸಿ ಹೆಚ್ಚಾಗಿರುವ ಕೆಂಪು ಈರುಳ್ಳಿ ಮುಖದ ಮೇಲಿನ ಬಂಗು ನಿವಾರಣೆಗೆ ಉತ್ತಮ ಮನೆ ಮದ್ದಾಗಿದೆ. ಕೆಂಪು ಈರುಳ್ಳಿಯನ್ನು ಕತ್ತರಿಸಿ ಕಲೆಗಳಿರುವ ಜಾಗದಲ್ಲಿ ಇದನಕ್ಕೆ ಎರಡು ಬಾರಿ ಹಚ್ಚಿದರೆ ಸಾಕು ನಿಮ್ಮ ಸಮಸ್ಯೆ ಬಗೆಹರಿಯುತ್ತದೆ.


ಪರಂಗಿ ಹಣ್ಣು: ಪರಂಗಿ ಹಣ್ಣಿನಲ್ಲಿ ಪ್ಯಾಪೇನ್ ಅಂಶವು ಹೆಚ್ಚಿರುವುದರಿಂದ ಇದು ಕೂಡ ಪಿಗ್ಮೆಂಟೇಶನ್ ನಿವಾರಣೆಗೆ ಉತ್ತಮ ಮನೆ ಮದ್ದಾಗಿದೆ. ತುರಿದ ಪಪ್ಪಾಯ ಹಣ್ಣಿನ ರಸವನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಬೇಕು. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಬಂಗು ಮಾಯವಾಗುತ್ತದೆ.


ಅಲೋವೇರಾ: ಅಲೋವೇರಾ ಮುಖದ ಸೌಂದರ್ಯವನ್ನು ಹೆಚ್ಚಿಸುವ ನೈಸರ್ಗಿಕ ಮದ್ದಾಗಿದೆ. ಇದರಲ್ಲಿ ಅಲೋಯಿನ್ ಅಂಶ ಇದೆ. ಬಂಗಿನ ಸಮಸ್ಯೆ ಇರುವವರು ಈ ಅಲೋವೇರಾವನ್ನು ಮುಖಕ್ಕೆ ಹಚ್ಚುವುದರಿಂದ ಕಲೆಯ ಸಮಸ್ಯೆ ಮಾಯವಾಗುತ್ತದೆ.


ಹಾಲು: ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಇರುವುದರಿಂದ ಇದು ಪಿಗ್ಮೆಂಟೇಶನ್ನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹಾಲಿನಲ್ಲಿ ಹತ್ತಿಯನ್ನು ನೆನೆಸಿ. ದಿನಕ್ಕೆ 2 ಬಾರಿ ಕಲೆಗಳಿರುವ ಜಾಗಕ್ಕೆ ಹಚ್ಚಿದರೆ ಕಲೆಗಳು ದೂರಾಗುತ್ತವೆ.


ಟೊಮೆಟೊ: ಟೊಮೆಟೊದಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ದ ಚರ್ಮವು ಕಾಂತಿಯುತವಾಗುತ್ತದೆ. ಹಾಗಾಗಿ ಟೊಮೆಟೊ ಪೇಸ್ಟ್ ನ್ನು ಮುಖದ ಕಲೆಗಳ ಮೇಲೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಕೆಲೆಗಳು ಮಾಯವಾಗುತ್ತಯದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !