ಮೇಷ
ವೃತ್ತಿ ಒತ್ತಡ ಅಧಿಕ. ಆದರೆ ಅಪರಾಹ್ನದ ವೇಳೆ ಒತ್ತಡ ನಿವಾರಣೆ. ಕೌಟುಂಬಿಕ ವಿಚಾರದಲ್ಲಿ ಪೂರಕ ಪರಿಸ್ಥಿತಿ. ಖರ್ಚು ನಿಯಂತ್ರಿಸಲು ಯತ್ನಿಸಿ.
ವೃಷಭ
ದಿನದಂತ್ಯಕ್ಕೆ ಅನಿರೀಕ್ಷಿತ ಬೆಳವಣಿಗೆ ನಿರೀಕ್ಷಿಸುವಿರಿ. ಹಣದ ಬೆಂಬತ್ತಬೇಡಿ. ಮಾನಸಿಕ ಒತ್ತಡ ಕಡಿಮೆ ಮಾಡಲು ಗಮನ ಕೊಡಿ.
ಮಿಥುನ
ಬದುಕು ನೀವು ಇಚ್ಚಿಸದ ಕಡೆ ಸಾಗುತ್ತಿದೆ. ಅದರ ಮೇಲೆ ನಿಯಂತ್ರಣ ಸಾಧಿಸಿ. ಇತರರ ಏಳಿಗೆಗೆ ಶ್ರಮಿಸುವ ಮುನ್ನ ನಿಮ್ಮ ಬೇಡಿಕೆಗೆ ಗಮನ ಕೊಡಿ.
ಕಟಕ
ನಿಮ್ಮ ಕರ್ತವ್ಯ ಪಾಲನೆಗೆ ಗಮನ ಕೊಡಿ. ಇತರ ವಿಷಯ ದೂರುತ್ತಾ ಕೂರಬೇಡಿ. ಸಮಸ್ಯೆ ತರುವ ವ್ಯಕ್ತಿಗಳನ್ನು ದೂರ ಇಡಿ. ಆರ್ಥಿಕ ಉನ್ನತಿ
ಸಿಂಹ
ಇಂದು ಕೆಲವಾರು ಬೆಳವಣಿಗೆ ಉಂಟಾದೀತು. ಹಳೆಯ ವಿಷಯ ಕೆದಕಬೇಡಿ. ಸಮಸ್ಯೆ ಹೆಚ್ಚಬಹುದು. ಕಿರಿಕಿರಿ ವ್ಯಕ್ತಿಗಳಿಂದ ದೂರವಿರಿ.
ಕನ್ಯಾ
ಕಹಿಸಿಹಿ ಬೆಳವಣಿಗೆ ಎರಡೂ ಸಂಭವ. ಕಚೇರಿ ರಾಜಕೀಯ ನೆಮ್ಮದಿ ಕೆಡಿಸುವುದು. ವೆಚ್ಚ ತುಂಬಾ ಹೆಚ್ಚಲಿದೆ. ಹಳೆ ಸ್ನೇಹಿತರ ಸಂಪರ್ಕ. ತುಲಾ
ಹೊಸ ಪ್ರಯೋಗ ಮಾಡಲು ಹೋಗಬೇಡಿ. ಇರುವ ಸ್ಥಿತಿಯನ್ನೆ ಮುಂದುವರಿಸಿ. ದೇಹಾರೋಗ್ಯ ಕಾಯಲು ಆದ್ಯತೆ ಕೊಡಿ. ವೃಶ್ಚಿಕ
ಪಾಲುದಾರರ ಜತೆ ಸಂಘರ್ಷ ಉಂಟಾದೀತು. ಅರಿತು ವ್ಯವಹರಿಸಿ. ಅನೂಹ್ಯ ಪ್ರಸಂಗ ಎದುರಿಸಬೇಕಾದೀತು. ಆರೋಗ್ಯ ಸಮಸ್ಯೆ. ಧನು
ಶುಭ ಬೆಳವಣಿಗೆ. ಉದ್ಯೋಗವಕಾಶ ಹೆಚ್ಚಳ. ಸ್ವಂತ ಉದ್ದಿಮೆದಾರರಿಗೆ ಯಶಸ್ಸು. ಬಂಧು ಭೇಟಿ. ದೈಹಿಕ ಅಸೌಖ್ಯ ತುಸು ಕಾಡಬಹುದು. ಮಕರ
ಹಣದ ವಿಚಾರ ಚಿಂತೆ ಕಾರಣವಾಗಲಿದೆ. ವೃತ್ತಿಯಲ್ಲಿ ಕಿರಿಕಿರಿ. ಹಿರಿಯರ ಬೇಡಿಕೆ ಅರಿತು ವ್ಯವಹರಿಸಿ. ಆರೋಗ್ಯ ಸುಸ್ಥಿರ, ಚಿಂತೆ ನಿವಾರಣೆ.
ಕುಂಭ
ಮಹತ್ವದ ಹೊಣೆ ನಿಮ್ಮ ಮೇಲೆ ಬೀಳಲಿದೆ. ತಪ್ಪಾಗದಂತೆ ಎಚ್ಚರ ವಹಿಸಿ. ಶಾಪಿಂಗ್‌ನಲ್ಲಿ ಹೆಚ್ಚು ಕಾಲ ಕಳೆಯದಿರಿ. ಅನವಶ್ಯ ವೆಚ್ಚ ಹೆಚ್ಚಳ.
ಮೀನ
ವಿಶ್ವಾಸ ವೃದ್ಧಿ. ಬಾಕಿ ಇರುವ ಕೆಲಸ ಪೂರ್ಣ. ಹಣದ ವಿಚಾರದಲ್ಲಿ ನೀಡುವ ಹಿತವಚನಕ್ಕೆ ಕಿವಿಗೊಡಿ. ಸಾಂಸಾರಿಕ ಸಾಮರಸ್ಯ ಹೆಚ್ಚಳ.



