July 25, 2026
Saturday, July 25, 2026
spot_img

Summer Drink | ಬೇಸಿಗೆಯಲ್ಲಿ ಕೂಲ್ ಆಗಿರೋಕೆ ಒಂದೆಲಗದ ಜ್ಯೂಸ್: ಮನೆಯಲ್ಲೇ ಸುಲಭವಾಗಿ ಮಾಡಿ

ಬೇಸಿಗೆಯ ಬಿಸಿಲಿನಲ್ಲಿ ದೇಹ ತಂಪಾಗಿರಲು ಮತ್ತು ಮನಸ್ಸು ಫ್ರೆಶ್ ಆಗಿರಲು ಒಂದೆಲಗ ಜ್ಯೂಸ್ ಒಳ್ಳೆಯ ಆಯ್ಕೆ. ಮೆದುಳಿನ ಆರೋಗ್ಯಕ್ಕೆ ನೆರವಾಗುವ ಈ ನೈಸರ್ಗಿಕ ಪಾನೀಯ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ, ಏಕಾಗ್ರತೆ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಬೆಳಗ್ಗೆ ಖಾಲಿ ಹೊಟ್ಟೆಗೆ ಅಥವಾ ಮಧ್ಯಾಹ್ನ ತಂಪಾಗಿ ಕುಡಿದರೆ ಇನ್ನಷ್ಟು ಲಾಭ.

ಬೇಕಾಗುವ ಪದಾರ್ಥಗಳು:

ಒಂದೆಲಗ ಎಲೆ – ಒಂದು ಹಿಡಿ
ಬೆಲ್ಲ ಅಥವಾ ಜೇನುತುಪ್ಪ – 2 ಚಮಚ
ಶುಂಠಿ – ಸಣ್ಣ ತುಂಡು
ಕಾಳುಮೆಣಸು – 2 ರಿಂದ 3
ನಿಂಬೆ ರಸ – 1 ಚಮಚ
ತಣ್ಣೀರು – 1 ಗ್ಲಾಸ್
ಐಸ್ ಕ್ಯೂಬ್‌ಗಳು – ಬೇಕಾದಷ್ಟು
ಪುದೀನಾ ಎಲೆ – ಸ್ವಲ್ಪ

ಮಾಡುವ ವಿಧಾನ:

ಮೊದಲು ಒಂದೆಲಗ ಎಲೆಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಮಿಕ್ಸಿ ಜಾರ್‌ಗೆ ಒಂದೆಲಗ, ಶುಂಠಿ, ಕಾಳುಮೆಣಸು, ಬೆಲ್ಲ ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಇದನ್ನು ಸೋಸಿ ಗ್ಲಾಸ್‌ಗೆ ಹಾಕಿ. ಅದಕ್ಕೆ ತಣ್ಣೀರು, ನಿಂಬೆ ರಸ ಮತ್ತು ಐಸ್ ಕ್ಯೂಬ್‌ಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮೇಲೆ ಪುದೀನಾ ಎಲೆ ಹಾಕಿ ಸರ್ವ್ ಮಾಡಿದರೆ ತಂಪಾದ ಸ್ಪೆಷಲ್ ಒಂದೆಲಗ ಜ್ಯೂಸ್ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !