May 4, 2026
Monday, May 4, 2026
spot_img

ಭಾರತದ ‘ಪ್ಯಾಡ್‌ಮ್ಯಾನ್’ ಗೆ ನೋಬೆಲ್ ನಾಮನಿರ್ದೇಶನ: ಅರುಣಾಚಲಂ ಮುರುಗಾನಂದಂ ಕ್ರಾಂತಿಯ ಕಥೆ ಇದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದ ಸಾಮಾಜಿಕ ಉದ್ಯಮಿ ಅರುಣಾಚಲಂ ಮುರುಗಾನಂದಂ ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ಕಡಿಮೆ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರವನ್ನು ಕಂಡುಹಿಡಿದು ಸಾವಿರಾರು ಮಹಿಳೆಯರ ಬದುಕಿನಲ್ಲಿ ಬೆಳಕು ತಂದ ಇವರ ಹೆಸರು 2026ರ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಈ ಗೌರವದ ಸುದ್ದಿ ಕೇಳಿ ಮೊದಲಿಗೆ ನಂಬಲಾಗಲಿಲ್ಲ ಎಂದು ಮುರುಗಾನಂದಂ ಪ್ರತಿಕ್ರಿಯಿಸಿದ್ದಾರೆ. ಪಾಂಡಿಚೇರಿಯ ಅರವಿಂದ್ ಕಣ್ಣಿನ ಆಸ್ಪತ್ರೆಯ ಡೀನ್ ಹಾಗೂ ಅಮೆರಿಕದ ವೈದ್ಯಕೀಯ ತಂಡಗಳು ಅವರ ಹೆಸರನ್ನು ಶಿಫಾರಸು ಮಾಡಿದ್ದು, ಅತಿ ಕಡಿಮೆ ಅವಧಿಯಲ್ಲೇ ಅದು ಅಂಗೀಕಾರ ಪಡೆದಿದೆ.

ಗ್ರಾಮೀಣ ಮಹಿಳೆಯರ ಋತುಸ್ರಾವದ ನೈರ್ಮಲ್ಯ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ಆರಂಭವಾದ ಅವರ ಪ್ರಯತ್ನ ಇಂದು ಸಾಮಾಜಿಕ ಕ್ರಾಂತಿಯಾಗಿ ಬೆಳೆದಿದೆ. ಅವರ ಯಂತ್ರಗಳು ಭಾರತ ಮಾತ್ರವಲ್ಲ, ಹಲವು ದೇಶಗಳಲ್ಲಿ ಬಳಕೆಯಾಗುತ್ತಿದ್ದು, ಸಾವಿರಾರು ಮಹಿಳೆಯರಿಗೆ ಉದ್ಯೋಗದ ದಾರಿ ತೆರೆದಿವೆ. ಸಮಾಜಮುಖಿ ಸಾಧನೆಗಾಗಿ ಈಗಾಗಲೇ ಪದ್ಮಶ್ರೀ ಸೇರಿದಂತೆ ಹಲವು ಗೌರವಗಳನ್ನು ಪಡೆದಿರುವ ಮುರುಗಾನಂದಂ ಸಾಧನೆಗೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !