October 11, 2026
Sunday, October 11, 2026
spot_img

ಮದುವೆ ಬೇಡ ಅಂದಿದ್ದರೆ ಕ್ಯಾನ್ಸಲ್‌ ಮಾಡ್ತಿದ್ವಿ, ಆದರೆ ಅನ್ಯಾಯವಾಗಿ ನನ್ನ ಮಗನನ್ನು ಕೊಂದಿದ್ಯಾಕೆ? ಕೇತನ್‌ ತಂದೆ ಕಣ್ಣೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಯಾಗೆ ಬಾಯ್‌ಫ್ರೆಂಡ್‌ ಇದ್ದ, ಮದುವೆ ಇಷ್ಟವಿರಲಿಲ್ಲ ಎಂದು ಒಂದು ಮಾತು ಹೇಳಿದ್ರೂ ಸಾಕಿತ್ತು. ಈ ಮದುವೆಯನ್ನು ನಾನು ನಿಲ್ಲಿಸ್ತಿದ್ದೆ. ಇದಕ್ಕಾಗಿ ನನ್ನ ಮಗನನ್ನು ಕೊಲ್ಲುವ ಅವಶ್ಯಕತೆ ಏನಿತ್ತು ಎಂದು ಕೇತನ್‌ ತಂದೆ ವಿಶಾಲ್‌ ಅಗರ್ವಾಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಯಾಗೆ ಬಾಯ್‌ಫ್ರೆಂಡ್‌ ಇದ್ದಾನೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಇಡೀ ಫ್ಯಾಮಿಲಿ ಜೊತೆ ನಗುತ್ತಾ ಮಾತನಾಡುತ್ತಿದ್ದಳು. ಕೇತನ್‌ ಒಂದು ಬಾರಿ ಮಾತ್ರ ನನ್ನ ಬಳಿ ಬಂದು ಸಿಯಾ ಸದಾ ಫೋನ್‌ನಲ್ಲಿ ಇರುತ್ತಾಳೆ, ಫೋನ್‌ ಯಾವಾಗಲೂ ಬ್ಯುಸಿ ಬರುತ್ತದೆ. ಕೇಳಿದರೆ ಸ್ನೇಹಿತರ ಜೊತೆ ಮಾತನಾಡ್ತಿದ್ದೇನೆ ಎಂದು ಹೇಳುತ್ತಾಳೆ ಎಂದು ಮಗ ಹೇಳಿಕೊಂಡಿದ್ದ ಎಂದಿದ್ದಾರೆ.

ಕೇತನ್‌ ಸಹೋದರಿ ಸಂಜನಾಗೆ ಸಿಯಾ ಮೇಲೆ ಮೊದಲಿನಿಂದಲೂ ಅನುಮಾನ ಇತ್ತು. ನನ್ನ ಅಣ್ಣ ಯಾವುದೇ ಡೇಂಜರ್‌ ಇರುವ ಜಾಗಗಳಿಗೆ ಹೋಗುವವನಲ್ಲ. ಅಷ್ಟು ತುದಿಯಲ್ಲಿ ಯಾಕೆ ನಿಂತಿದ್ದ ಎಂದು ಸಿಯಾಳನ್ನು ಪ್ರಶ್ನಿಸಿದಾಗ ಸಿಯಾ ಒಂದು ಉತ್ತರ ನೀಡಲಾಗದೇ ಒದ್ದಾಡಿದ್ದಳು. ಈ ಅನುಮಾನದಿಂದ ಸಂಜನಾ ಪೊಲೀಸರ ಬಳಿ ತೆರಳಿದ್ದಳು. ಸಿಯಾ ಈಗಾಗಲೇ ಒಂದು ಬಾರಿ ಕೇತನ್‌ನ್ನು ಮೇಲಿನಿಂದ ಕೆಳಕ್ಕೆ ತಳ್ಳಿದ್ದಳು. ಆದರೆ ಆದ ಪೊದೆಯನ್ನು ಹಿಡಿದುಕೊಂಡು ಬಚಾವ್‌ ಆಗಿದ್ದ. ಹಾವು ಬಂದಿತ್ತು, ಅದರಿಂದ ರಕ್ಷಿಸಲು ಪ್ಯಾನಿಕ್‌ ಆಗಿ ನಿನ್ನನ್ನು ತಳ್ಳಿದೆ ಎಂದು ಹೇಳಿ ನಂಬಿಸಿದ್ದಳು.ಇಷ್ಟು ಕ್ರೂರವಾಗಿ ನನ್ನ ಮಗನನ್ನು ಕೊಂದ ಆ ಇಬ್ಬರು ಹಂತಕರಿಗೆ ಕೋರ್ಟ್ ಮರಣದಂಡನೆ ಶಿಕ್ಷೆಯನ್ನೇ ವಿಧಿಸಬೇಕು ಎಂದು ವಿಶಾಲ್ ಅಗರ್ವಾಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Must Read