ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ದಾಖಲಿಸಿದ ಭರ್ಜರಿ ಮುನ್ನಡೆ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ಗಮನ ಸೆಳೆದಿವೆ. ಗೆಲುವಿನ ಉತ್ಸಾಹದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಗಳಲ್ಲಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದು, ಮೀನೂಟ ಮತ್ತು ಅನ್ನ ಬಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಆಹಾರ ಪದ್ಧತಿಗಳ ಮೇಲೆ ನಿರ್ಬಂಧ ಹೇರಲಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಯಾಗಿ, “ಆಹಾರದ ಆಯ್ಕೆ ವೈಯಕ್ತಿಕ ಹಕ್ಕು” ಎಂಬ ಸಂದೇಶದೊಂದಿಗೆ ಕಾರ್ಯಕರ್ತರು ಮೀನೂಟ ಹಂಚಿ ತಮ್ಮ ನಿಲುವು ವ್ಯಕ್ತಪಡಿಸಿದರು. ಈ ಸಂಭ್ರಮಾಚರಣೆ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಯಿತು.
ಇದನ್ನೂ ಓದಿ:
ಈ ಬಾರಿ ಬಂಗಾಳದಲ್ಲಿ ನಡೆದ ತೀವ್ರ ಪೈಪೋಟಿಯ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಸಾಧನೆ ಮಾಡಿದ್ದು, ದೀರ್ಘಕಾಲದ ರಾಜಕೀಯ ಸಮೀಕರಣವನ್ನೇ ಬದಲಿಸಿದಂತಾಗಿದೆ. ಟಿಎಂಸಿ, ಬಿಜೆಪಿ ಮತ್ತು ಇತರ ಪಕ್ಷಗಳ ನಡುವಿನ ಕಠಿಣ ಸ್ಪರ್ಧೆಯ ನಡುವೆ ಮತದಾರರು ಹೊಸ ತೀರ್ಪು ನೀಡಿದ್ದಾರೆ.
ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ ಭಾರೀ ಪ್ರಮಾಣದ ಜನರು ಪಾಲ್ಗೊಂಡಿದ್ದು, ಕೆಲವೆಡೆ ಮರುಮತದಾನವೂ ನಡೆದಿತ್ತು. ಅಂತಿಮ ಫಲಿತಾಂಶದೊಂದಿಗೆ ಬಂಗಾಳ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾದಂತೆ ಕಾಣುತ್ತಿದೆ.



