May 5, 2026
Tuesday, May 5, 2026
spot_img

ಅವಳಿಗಾಗಿ ಪತ್ನಿಗೆ ಡಿವೋರ್ಸ್‌ ಕೊಟ್ಟ ವ್ಯಕ್ತಿ, ಗಂಡನನ್ನು ಬಿಟ್ಟು ಬರೋದಿಲ್ಲ ಎಂದ ಯುವತಿ! ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಫೇರ್‌ ಅಫೇರ್‌ನಂತೆಯೇ ಇರಲಿ ಮದುವೆ ಬೇಡ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯನ್ನು ಭೀಕರವಾಗಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಜಿಂಕೆಬಚ್ಚಹಳ್ಳಿ ಗ್ರಾಮದ ಸರೋಜಾ ಹಾಗೂ ರಾಮಾಂಜಿ ಅಫೇರ್‌ ಇಟ್ಟುಕೊಂಡಿದ್ದರು. ಸರೋಜಾಗೋಸ್ಕರ ರಾಮಾಂಜಿ ತನ್ನ ಮದುವೆಯನ್ನು ಕೊನೆಗಾಣಿಸಿಕೊಂಡಿದ್ದ.

ಪತ್ನಿಗೆ ಡಿವೋರ್ಸ್‌ ಕೊಟ್ಟ ನಂತರ ರಾಮಾಂಜಿ ಸರೋಜಾಗೆ ಗಂಡನನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದ. ಆದರೆ ಇದಕ್ಕೆ ಸರೋಜಾ ಒಪ್ಪಿಗೆ ನೀಡಿರಲಿಲ್ಲ. ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕಿಯಾದ ಸರೋಜಾರನ್ನು ಲಾಂಗ್‌ಡ್ರೈವ್‌ ಹೋಗೋಣ ಎಂದು ರಾಮಾಂಜಿ ಕರೆದುಕೊಂಡು ಬಂದಿದ್ದ.

ಲಾಂಗ್‌ಡ್ರೈವ್‌ ವೇಳೆ ಆಕೆಯನ್ನು ಕೊಲೆ ಮಾಡಿ, ಕಾರಿಗೆ ಬೆಂಕಿ ಹಚ್ಚಿ, ಬಳಿಕ ರೈಲಿಗೆ ತಲೆಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೋಶಿಯಲ್‌ ಮೀಡಿಯಾ ಮೂಲಕ ಇಬ್ಬರೂ ಪರಿಚಯವಾಗಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !