May 5, 2026
Tuesday, May 5, 2026
spot_img

CRIME | ಲೈಂಗಿಕ ಕ್ರಿಯೆಗೆ ಒಪ್ಪದ ವಿಧವೆಯ ಖಾಸಗಿ ಅಂಗಕ್ಕೆ ಒದ್ದು ಕೊಂದ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಯ ಖಾಸಗಿ ಅಂಗಗಳಿಗೆ ಒದ್ದು ಕೊಲೆ ಮಾಡಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿಯಲ್ಲಿ ನಡೆದಿದೆ.

35 ವರ್ಷದ ರಮ್ಯಾ ಎರಡು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಅದಾದ ನಂತರ ಆರೋಪಿ ಚಂದ್ರ ಎನ್ನುವವರ ಜತೆ ಸಲುಗೆ ಇಂದ ಇದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದ ರಮ್ಯಾ ಅತ್ತೆಯ ಅಂತ್ಯಸಂಸ್ಕಾರಕ್ಕಾಗಿ ಅತ್ತಿಹಳ್ಳಿಗೆ ಬಂದಿದ್ದರು.

ಅಂತ್ಯಸಂಸ್ಕಾರ ಮುಗಿಸಿ ಮನೆಯಲ್ಲಿ ಮಲಗಿದ್ದ ವೇಳೆ ಆರೋಪಿ ಚಂದ್ರ ಆಕೆಯನ್ನು ಲೈಂಗಿಕ ಕ್ರಿಯೆಗೆ ಬಲವಂತಪಡಿಸಿದ್ದಾನೆ. ಆಗ ರಮ್ಯಾ ಬೇಡ ಎಂದಿದ್ದಕ್ಕೆ ಸಿಟ್ಟಿನಲ್ಲಿ ಆಕೆಯ ಖಾಸಗಿ ಅಂಗಗಳಿಗೆ ಒದ್ದಿದ್ದಾನೆ. ಇದಾದ ಕೆಲವು ದಿನಗಳಲ್ಲಿ ರಮ್ಯಾಗೆ ತೀವ್ರ ಹೊಟ್ಟೆ ನೋವು ಕಾಣಿಸಿದೆ. ಆಸ್ಪತ್ರೆಯಲ್ಲಿ ಇಂದು ರಮ್ಯಾ ಮೃತಪಟ್ಟಿದ್ದಾರೆ. ರಮ್ಯಾ ಸಹೋದರ ಚಂದ್ರನ ವಿರುದ್ಧ ದೂರು ದಾಖಲಿಸಿದ್ದಾರೆ.

ರಮ್ಯಾ ಗಂಡನನ್ನು ಕಳೆದುಕೊಂಡ ನಂತರ ಬೆಂಗಳೂರಿನಲ್ಲಿ ಜೀವನ ಮಾಡುತ್ತಿದ್ದಳು. ಊರಿಗೆ ಹೋದಾಗ ಚಂದ್ರನ ಜೊತೆ ಓಡಾಟ, ಮಾತುಕತೆ ಇತ್ತು. ನಾವು ಮುಂದೊಂದು ದಿನ ಆತ ಆಕೆಗೆ ಆಸರೆಯಾಗುತ್ತಾನೆ ಎಂದು ಸುಮ್ಮನಿದ್ದೆವು. ಆದರೆ ಆಕೆಯ ಎದೆಗೆ, ಹೊಟ್ಟೆಗೆ ಹಾಗೂ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದಾನೆ. ಕಠಿಣ ಶಿಕ್ಷೆ ನೀಡಿ ಎಂದು ಸಹೋದರ ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !