October 15, 2026
Thursday, October 15, 2026
spot_img

ರಾಜೀನಾಮೆ ಕೊಡದಿದ್ದರೆ ಕಿತ್ತೆಸಲಾಗುವುದು: ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ ಹಿಮಂತಾ ಬಿಸ್ವಾ ಶರ್ಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದಿಂದ ಆಘಾತಕ್ಕೆ ಒಳಗಾದ ಮಮತಾ ಬ್ಯಾನರ್ಜಿ ಅವರು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ, ರಾಜೀನಾಮೆ ಕೊಡದಿದ್ದರೆ ಕಿತ್ತೆಸಲಾಗುವುದು ಎಂದು ಖಡಕ್ ಆಗಿ ತಿಳಿಸಿದ್ದಾರೆ.

ಈ ದೇಶವು ಅವರಿಗೆ ಬೇಕಾದ ರೀತಿ ನಡೆಯುವುದಿಲ್ಲ. ಇಷ್ಟು ಸಮಯ ಬಂಗಾಳ ಜನತೆ ಎಲ್ಲವನ್ನು ಸಹಿಸಿಕೊಂಡಿದೆ. ಇನ್ನೂ ಅದೆಲ್ಲವೂ ಸಾಧ್ಯವಿಲ್ಲ. ರಾಜೀನಾಮೆ ನೀಡದಿದ್ದರೆ, ವಜಾಗೊಳಿಸಲಾಗುತ್ತೆ. ರಾಜ್ಯಪಾಲರು ಕೂಡ ಒಂದು ನಿರ್ದಿಷ್ಟ ಅವಧಿಯವರೆಗೆ ಕಾಯುತ್ತಾರೆ. ಬಳಿಕ ಅವರನ್ನು ವಜಾಗೊಳಿಸಲಾಗುತ್ತದೆ ಎಂದು ಶರ್ಮಾ ಹೇಳಿದರು.

ನಿಮ್ಮ 100 ಸ್ಥಾನಗಳನ್ನು ಕಸಿದುಕೊಂಡಿದ್ದಾರೆ ಎಂದು ಹೇಳುತ್ತೀರಾ, ಹಾಗಿದ್ರೆ ನಾನು ಕೂಡ ಹೇಳುತ್ತೇನೆ, ಕಾಂಗ್ರೆಸ್ ನನ್ನಿಂದ19 ಸ್ಥಾನಗಳನ್ನು ಕಸಿದುಕೊಂಡಿದೆ. ನನಗೆ 126 ಸೀಟು ಬರಬೇಕಿತ್ತು ಎಂದು. ಹೀಗಾಗಿ ಇದೆಲ್ಲವೂ ಹೇಳುವ ಮಾತಲ್ಲ. ಇದರಿಂದ ದೇಶ ನಡೆಯಲ್ಲ ಎಂದು ಟೀಕಿಸಿದರು.

Must Read