May 20, 2026
Wednesday, May 20, 2026
spot_img

ಚುನಾವಣೆಯಲ್ಲಿ ಸ್ಪರ್ಧಿಸಲು 5 ಕೋಟಿ ನೀಡಬೇಕು: ದೀದಿ ಪಕ್ಷದ ಕರಾಳ ಮುಖ ತೆರೆದಿಟ್ಟ ಮನೋಜ್ ತಿವಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಪಕ್ಷ ಹೀನಾಯ ಸೋಲು ಅನುಭವಿಸಿದ್ದು, ಈ ಮೂಲಕ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿದೆ.

ಇತ್ತ ಸೋಲಿನ ಆಘಾತದಲ್ಲಿರುವ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಯುವ ನಾಯಕ, ಮಾಜಿ ಸಚಿವ ಮನೋಜ್ ತಿವಾರಿ ಟಿಎಂಸಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ಚುನಾವಣಾ ಫಲಿತಾಂಶ ಹೊರಬಿದ್ದ ಒಂದು ದಿನದ ನಂತರ ಬಂಗಾಳ ಮಾಜಿ ಕ್ರೀಡಾ ಸಚಿವ , ಪಕ್ಷಕ್ಕೆ ವಿದಾಯ ಹೇಳುವುದಾಗಿ ಘೋಷಣೆ ಮಾಡಿದ್ದಾರೆ. ಈ ವೇಳೆ ದೀದಿ ವಿರುದ್ಧ ಗುಡುಗಿದ್ದಾರೆ .

ಈ ಕುರಿತು ಮಾಧ್ಯಮಗಳು ಮುಂದೆ ಮಾತನಾಡಿದ ಅವರು, ಚುನಾವಣೆ ಫಲಿತಾಂಶದಿಂದ ನನಗೆ ಯಾವುದೇ ಆಶ್ಚರ್ಯವಿಲ್ಲ. ಈ ರೀತಿ ಆಗಲಿದೆ ಮೊದಲೇ ತಿಳಿದಿತ್ತು. ಯಾಕೆಂದರೆ ಈ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಚುನಾವಣೆಗೆ ಸ್ಪರ್ಧಿಸಬೇಕಿದ್ದರೆ ಈ ಪಕ್ಷದಲ್ಲಿ ಟಿಕೆಟ್ ಪಡೆಯಲು ಪ್ರತಿಯೊಬ್ಬ ಅಭ್ಯರ್ಥಿಯೂ 5 ಕೋಟಿ ರೂ. ಪಾವತಿಸಬೇಕಾಗಿತ್ತು. ನೀವು ಇಷ್ಟು ಹಣ ಕೊಟ್ಟರೆ ಟಿಕೆಟ್ ಖಚಿತವಾಗುತ್ತಿತ್ತು. ನನ್ನ ಬಳಿಯೂ ಹಣ ಕೇಳಿದರು, ಆದರೆ ನಾನು ನೀಡಲು ಒಪ್ಪಲಿಲ್ಲ ಎಂದು ದೀದಿ ಪಕ್ಷದ ಭ್ರಷ್ಟಾಚಾರವನ್ನು ತೆರೆದಿಟ್ಟಿದ್ದಾರೆ.

ಈ ಬಾರಿ 70-72 ಅಭ್ಯರ್ಥಿಗಳು ಸುಮಾರು 5 ಕೋಟಿ ರೂ. ಪಾವತಿಸಿ ಟಿಕೆಟ್ ಪಡೆದಿದ್ದಾರೆ . ಆದರೆ ಅದರಲ್ಲಿ ಗೆದ್ದವರು ಎಷ್ಟು ಮಂದಿ ನೋಡಿ. ಹೀಗಾಗಿ ನನ್ನ ಜೀವನದ ತೃಣಮೂಲ ಅಧ್ಯಾಯ ಮುಗಿದಿದೆ ಎಂದು ಮನೋಜ್ ಹೇಳಿದ್ದಾರೆ.

ನನಗೆ ರಾಜಕೀಯಕ್ಕೆ ಬರಲು ಇಷ್ಟವಿರಲಿಲ್ಲ. ಅಂದು 2019 ರಲ್ಲಿ, ತೃಣಮೂಲ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವುದಾಗಿ ಆಫರ್ ನೀಡಿತು. ನಾನು ಆ ಸಂದರ್ಭದಲ್ಲಿ ರಣಜಿ ಟ್ರೋಫಿ ಮತ್ತು ಐಪಿಎಲ್​​ನಲ್ಲಿ ಆಡುತ್ತಿದ್ದೆ. ಆ ಸಮಯದಲ್ಲಿ,ದೀದಿ ಲೋಕಸಭೆಗೆ ಸ್ಪರ್ಧಿಸಬೇಕೆಂದು ಬಯಸಿದ್ದರು. ನಾನು ನಿರಾಕರಿಸಿದೆ. ಬಳಿಕ 2021 ರ ಚುನಾವಣೆಗೆ ಮೊದಲು ದೀದಿ ಮತ್ತೆ ಕರೆ ಮಾಡಿ, ಶಿವಪುರದಿಂದ ಸ್ಪರ್ಧಿಸಲು ಕೇಳಿಕೊಂಡರು. ಈ ವೇಳೆ ಬದಲಾವಣೆಗಾಗಿ ಒಪ್ಪಿಗೆ ನೀಡಿದೆ.

ಆದರೆ ಗೆದ್ದರು ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಏನಾದರೂ ಮಾಡಲು ಬಯಸಿದ್ದರೂ ಕೂಡ ನನ್ನನ್ನು ತಡೆಯುತ್ತಿದ್ದರು. ದೀದಿ, ನಿಮ್ಮೊಂದಿಗೆ ಒಂದಷ್ಟು ಅಭಿವೃದ್ಧಿ ಬಗ್ಗೆ ನಿರ್ದಿಷ್ಟ ವಿಷಯದ ಬಗ್ಗೆ ಮಾತನಾಡಬೇಕು ಎಂದು ಹೇಳಿದರೂ ಕೂಡ ನಿಮ್ಮಂತಹ ಜನರಿಗೆ ನನ್ನ ಬಳಿ ಸಮಯವಿಲ್ಲ ಎಂದು ಹೇಳುತ್ತಿದ್ದರು ಎಂದು ಮಮತಾ ಬ್ಯಾನರ್ಜಿಯ ಕರಾಳ ಮುಖ ಬಿಚ್ಚಿಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !