May 7, 2026
Thursday, May 7, 2026
spot_img

ಪರಿಸರ ಸಂರಕ್ಷಣೆಯತ್ತ ಕಣ್ಣುಹಾಯಿಸಿದ ಆಪಲ್: ಭಾರತದಲ್ಲಿ ಹಸಿರು ಇಂಧನಕ್ಕೆ ಭಾರೀ ಫಂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ತನ್ನ ವಿಸ್ತರಣೆಯನ್ನು ವೇಗಗೊಳಿಸಿರುವ ತಂತ್ರಜ್ಞಾನ ದಿಗ್ಗಜ ಆಪಲ್ ಇದೀಗ ಪರಿಸರ ಸಂರಕ್ಷಣೆಯತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಕಾರ್ಬನ್ ಹೊರಸೂಸುವಿಕೆಯನ್ನು ಶೂನ್ಯಕ್ಕಿಳಿಸುವ ಮಹತ್ವಾಕಾಂಕ್ಷಿ ಗುರಿಯ ಭಾಗವಾಗಿ, ದೇಶದ ಸ್ವಚ್ಛ ಇಂಧನ ಕ್ಷೇತ್ರದಲ್ಲಿ 1000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಕಂಪನಿ ಘೋಷಿಸಿದೆ.

2030ರೊಳಗೆ ತನ್ನ ಉತ್ಪಾದನೆ, ಪೂರೈಕೆ ಸರಪಳಿ ಮತ್ತು ಉತ್ಪನ್ನ ಬಳಕೆಯ ಸಂಪೂರ್ಣ ಚಟುವಟಿಕೆಯನ್ನು ಕಾರ್ಬನ್ ನ್ಯೂಟ್ರಲ್ ಆಗಿ ರೂಪಿಸುವ ಗುರಿಯನ್ನು ಆಪಲ್ ಹೊಂದಿದೆ. ಇದೇ ಉದ್ದೇಶದಿಂದ ಭಾರತದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಹೆಚ್ಚು ಒತ್ತು ನೀಡುತ್ತಿದೆ.

ಇದನ್ನೂ ಓದಿ:

ಈ ಯೋಜನೆಯಡಿ ಸೌರಶಕ್ತಿ ಉತ್ಪಾದನೆಯನ್ನು ವಿಸ್ತರಿಸಲು ಆಪಲ್ ಮುಂದಾಗಿದ್ದು, ಖಾಸಗಿ ಇಂಧನ ಸಂಸ್ಥೆಗಳ ಸಹಭಾಗಿತ್ವದಲ್ಲಿ 150 ಮೆಗಾವ್ಯಾಟ್‌ಗಿಂತ ಹೆಚ್ಚು ಹಸಿರು ಇಂಧನ ಉತ್ಪಾದನೆಗೆ ಸಿದ್ಧತೆ ನಡೆಸಿದೆ. ಇದರ ಮೂಲಕ ಸಾವಿರಾರು ಮನೆಗಳಿಗೆ ಪರಿಸರ ಸ್ನೇಹಿ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಇಂಧನ ಕ್ಷೇತ್ರದ ಜೊತೆಗೆ ನೀರಿನ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಯೋಜನೆಗಳ ಮೇಲೂ ಆಪಲ್ ಗಮನ ಹರಿಸಿದೆ. ಭಾರತದಲ್ಲಿ ಉತ್ಪಾದನಾ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆ, ಪರಿಸರ ಸಮತೋಲನ ಕಾಪಾಡುವ ಜವಾಬ್ದಾರಿಯನ್ನೂ ಕಂಪನಿ ಸಮಾನವಾಗಿ ಹೊತ್ತುಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !