August 23, 2026
Sunday, August 23, 2026
spot_img

ಕೈಕೊಟ್ಟ ಲೆಕ್ಕಾಚಾರ: ವಿಜಯ್ ಗೆ ಶಾಕ್; ನಮ್ಮ ಸಪೋರ್ಟ್ ಯಾವತ್ತಿದ್ರೂ ಡಿಎಂಕೆಗೆ ಮಾತ್ರ ಎಂದ IUML

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ರಾಜಕೀಯ ಚಿತ್ರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಸರ್ಕಾರ ರಚನೆಗೆ ಮುಂದಾಗಿರುವ ವಿಜಯ್ ನೇತೃತ್ವದ ಟಿವಿಕೆಗೆ ಮತ್ತೆ ಸಂಖ್ಯಾಬಲದ ಸವಾಲು ಎದುರಾಗಿದೆ. ಬಹುಮತದ ಗಡಿಪಾಯ ತಲುಪುವ ನಿರೀಕ್ಷೆಯಲ್ಲಿದ್ದ ಟಿವಿಕೆಗೆ ಕೊನೆಯ ಕ್ಷಣದಲ್ಲಿ ಬೆಂಬಲದ ಲೆಕ್ಕಾಚಾರವೇ ತಲೆನೋವಾಗಿ ಪರಿಣಮಿಸಿದೆ.

ಡಿಎಂಕೆ ಮೈತ್ರಿಯ ಭಾಗವಾಗಿದ್ದ ಇಂಡಿಯನ್ ಮುಸ್ಲಿಂ ಲೀಗ್, ವಿಜಯ್ ಪರ ನಿಲ್ಲಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಟಿವಿಕೆಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರ ತಮಿಳುನಾಡಿನ ಅಧಿಕಾರ ರಾಜಕಾರಣದಲ್ಲಿ ಹೊಸ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ:

ಪ್ರಸ್ತುತ 107 ಸ್ಥಾನಗಳನ್ನು ಗೆದ್ದಿರುವ ಟಿವಿಕೆಗೆ ಕಾಂಗ್ರೆಸ್‌ನ 5 ಶಾಸಕರು ಹಾಗೂ ತಲಾ 2 ಸ್ಥಾನ ಹೊಂದಿರುವ ಸಿಪಿಐ ಮತ್ತು ಸಿಪಿಎಂ ಬೆಂಬಲ ಘೋಷಿಸಿವೆ. ಇದರಿಂದ ವಿಜಯ್ ಪರ ಒಟ್ಟು 116 ಶಾಸಕರ ಬೆಂಬಲ ಸಿಕ್ಕಂತಾಗಿದೆ. ಆದರೆ ಸರ್ಕಾರ ರಚನೆಗೆ ಅಗತ್ಯವಾದ 118 ಸಂಖ್ಯೆಗೆ ಇನ್ನೂ ಎರಡು ಸ್ಥಾನಗಳ ಕೊರತೆ ಉಳಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !