May 10, 2026
Sunday, May 10, 2026
spot_img

ದಿನಭವಿಷ್ಯ: ವೃತ್ತಿಯಲ್ಲಿ ಪ್ರಗತಿ, ನಿಮ್ಮ ಕರ್ತವ್ಯ ನಿಷ್ಠೆಗೆ ಇಂದು ಸರಿಯಾದ ಗೌರವ ಸಿಗಲಿದೆ

ಮೇಷ
ನಿಮ್ಮ ಪ್ರಗತಿ ಯಾರೂ ತಡೆಯಲಾರರು. ನಿಮ್ಮ ಕಾರ್ಯನಿಷ್ಠೆ ಮೆಚ್ಚುಗೆ ಗಳಿಸುವುದು. ಖರ್ಚು ಏರಿಕೆ ಚಿಂತೆಗೆ
ಕಾರಣವಾದೀತು.
ವೃಷಭ
ಹಣದ ಕೊರತೆ ಎದುರಿಸುವಿರಿ. ನಿಮ್ಮ ಮನೋಸ್ಥೈರ್ಯ ಕುಗ್ಗಿಸುವ ಜನರಿಂದ ದೂರವಿರಿ. ಏಕಾಂಗಿಗಳಿಗೆ ವಿವಾಹ ನೆಂಟಸ್ತಿಕೆ.
ಮಿಥುನ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಪೂರಕ ಬೆಳವಣಿಗೆ. ಶಂಕಾಸ್ಪದ ವ್ಯವಹಾರದಲ್ಲಿ ಹಣ ಹೂಡಬೇಡಿ. ಕೌಟುಂಬಿಕ ಸಾಮರಸ್ಯ. ಮಿತ್ರ ಭೇಟಿ.
ಕಟಕ
ಹೊರಗೆ ಸಂತೋಷ ಹುಡುಕಬೇಡಿ. ನಿಮ್ಮೊಳಗೇ ಅದು ಇದೆ. ಕುಟುಂಬದ ಜತೆ ಕಾಲ ಕಳೆಯಿರಿ. ಕಲಾವಿದರಿಗೆ ಪ್ರೋತ್ಸಾಹ ಸಿಗಲಿದೆ. ಧನಲಾಭ.
ಸಿಂಹ
ನೆಮ್ಮದಿ ಪಡೆಯಬೇಕೆ? ನಿಮ್ಮ ಕಾರ್ಯವೈಖರಿ, ಚಿಂತನಾ ಶೈಲಿ ಬದಲಿಸಿಕೊಳ್ಳಿ. ಎಲ್ಲರ ಜತೆ ಹೊಂದಾಣಿಕೆ ಮಾಡಿಕೊಳ್ಳಿ.
ಕನ್ಯಾ
ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗಿ. ನಿಮ್ಮ ಕೆಲಸಕ್ಕೆ ಟೀಕೆ ಕೇಳಿಬಂದೀತು. ಲೋಪ ಸರಿಪಡಿಸಿಕೊಳ್ಳಿ. ಹಠ ಹಿಡಿದು ಕೂರಬೇಡಿ.
ತುಲಾ
ವೃತ್ತಿ ಗುರಿ ಸಾಧನೆ. ಸಣ್ಣಪುಟ್ಟ ಜಗಳದಲ್ಲಿ ಭಾಗವಹಿಸಬೇಡಿ. ಹಣಕಾಸು ವ್ಯವಹಾರದಲ್ಲಿ ಏರಿಳಿತ ಕಂಡೀತು. ಆರೋಗ್ಯ ಗಮನಿಸಿ.
ವೃಶ್ಚಿಕ
ಅನರ್ಹರ ಕುರಿತಂತೆ ಅಽಕ ಮುತುವರ್ಜಿ ವಹಿಸಿ ನಿಮ್ಮ ಶ್ರಮ ವ್ಯಯಿಸಬೇಡಿ. ಹಿತೈಷಿಗಳ ಮಾತು ಕೇಳಿ. ಕೌಟುಂಬಿಕ ಅಸಮಾಧಾನ.
ಧನು
ಹಣದ ವ್ಯವಹಾರ ತೃಪ್ತಿಕರ. ಕಾರ್ಯಸಾ-ಲ್ಯ. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ಸಂಬಂಧದಲ್ಲಿ ಪೊಸೆಸಿವ್ ಪ್ರವೃತ್ತಿ ಬಿಟ್ಟುಬಿಡಿ.
ಮಕರ
ಕೆಲಸದಿಂದ ವಿರಾಮ ಪಡೆದು ಪ್ರವಾಸ ಹೊರಡಿ. ಒತ್ತಡ ನಿವಾರಣೆಗೆ ಇದು ದಾರಿ. ನಿರೀಕ್ಷೆ ಈಡೇರಿಸಲು ಹೆಚ್ಚು ಪರಿಶ್ರಮ ಅಗತ್ಯ.
ಕುಂಭ
ಹಣದ ವ್ಯವಹಾರ ನಿರಾಶೆ ತಂದೀತು. ನೀವು ಬಯಸಿದ ಪ್ರಗತಿ ಕಾಣಿಸದು. ಶೀತದಂತಹ ಆರೋಗ್ಯ ಸಮಸ್ಯೆ. ಬಂಧುಗಳ ಜತೆ ಕಲಹ.
ಮೀನ
ನಿಮ್ಮ ಮನಸ್ಸಿನ ಮಾತು ಕೇಳಿ. ಇತರರ ಮಾತಿಗೆ ಮರುಳಾಗಿ ಕೆಟ್ಟ ನಿರ್ಧಾರ ತಾಳಬೇಡಿ. ಸಮಾರಂಭದಲ್ಲಿ ಭಾಗಿ. ಬಂಧುಮಿತ್ರರ ಭೇಟಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !