August 18, 2026
Tuesday, August 18, 2026
spot_img

Snacks | ಸಂಜೆ ಚಹಾದೊಂದಿಗೆ ಜಂಕ್ ಫುಡ್ ತಿನ್ನುವ ಬದಲು ಈ ಹೆಲ್ದೀ ಮಸಾಲ ಶೇಂಗಾ ಟ್ರೈ ಮಾಡಿ

ಮಸಾಲ ಶೇಂಗಾ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ, ಗರಿಗರಿಯಾದ ಮತ್ತು ಖಾರವಾದ ಒಂದು ಸಾಂಪ್ರದಾಯಿಕ ತಿಂಡಿಯಾಗಿದೆ. ಕಡಲೆಕಾಯಿ ಬೀಜಗಳಿಗೆ ಮಸಾಲೆ ಮತ್ತು ಹಿಟ್ಟಿನ ಕೋಟಿಂಗ್ ನೀಡಿ ಇದನ್ನು ತಯಾರಿಸಲಾಗುತ್ತದೆ. ಇದು ಸಂಜೆ ಚಹಾ ಜೊತೆಗೆ ಅಥವಾ ಟೈಮ್ ಪಾಸ್‌ಗೆ ಅತ್ಯುತ್ತಮವಾದ ತಿಂಡಿಯಾಗಿದೆ.

ಬೇಕಾಗುವ ಸಾಮಾಗ್ರಿಗಳು:
ಹಸಿ ಶೇಂಗಾ:
ಕಡಲೆ ಹಿಟ್ಟು
ಅಕ್ಕಿ ಹಿಟ್ಟು
ಅಚ್ಚಖಾರದ ಪುಡಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲ ಅಥವಾ ಚಾಟ್ ಮಸಾಲ
ಇಂಗು
ಉಪ್ಪು
ಎಣ್ಣೆ
ನೀರು

ಮಾಡುವ ವಿಧಾನ:
ಮೊದಲು ಶೇಂಗಾವನ್ನು ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರಿನಿಂದ ತೊಳೆದುಕೊಳ್ಳಬೇಕು. ನಂತರ ನೀರನ್ನು ಪೂರ್ತಿ ಬಸಿದು, ತೇವವಾಗಿರುವ ಶೇಂಗಾಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಉಪ್ಪು ಮತ್ತು ಇಂಗು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಬೇಕು. ಹಿಟ್ಟು ಶೇಂಗಾಗೆ ಚೆನ್ನಾಗಿ ಅಂಟಿಕೊಳ್ಳಲು 1-2 ಚಮಚ ನೀರನ್ನು ಮೇಲೆ ಚಿಮುಕಿಸಿ ಮೃದುವಾಗಿ ಕಲಸಿ. ಶೇಂಗಾದ ಮೇಲೆ ಹಿಟ್ಟು ದಪ್ಪವಾಗಿ ಕುಳಿತಿರಬೇಕು. ಬಳಿಕ ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಎಣ್ಣೆ ಕಾದ ನಂತರ ಉರಿಯನ್ನು ಮಧ್ಯಮಕ್ಕೆ ಇರಿಸಿ. ಮಸಾಲ ಶೇಂಗಾವನ್ನು ಒಂದೊಂದಾಗಿ ಅಥವಾ ಬಿಡಿಬಿಡಿಯಾಗಿ ಎಣ್ಣೆಗೆ ಹಾಕಬೇಕು. ಶೇಂಗಾ ಹೊಂಬಣ್ಣಕ್ಕೆ ಬಂದು, ಎಣ್ಣೆಯ ನೊರೆ ಕಡಿಮೆಯಾದಾಗ ತೆಗೆಯಬೇಕು ಆಗ ಶೇಂಗ ಮಸಾಲ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !