September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 62 | ರುಚಿಯ ಜತೆಗೆ ಆರೋಗ್ಯ: ಮೆಂತ್ಯ ಸೊಪ್ಪಿನಿಂದ ಮಾಡಿ ಈ ಗರಿಗರಿಯಾದ ದೋಸೆ

ಬೆಳಗ್ಗೆ ತಿಂಡಿಗೆ ಸದಾ ಇಡ್ಲಿ, ದೋಸೆ ತಿಂದು ಬೇಸರವಾಗಿದ್ದರೆ, ಆರೋಗ್ಯ ಮತ್ತು ರುಚಿಯ ಅದ್ಭುತ ಕಾಂಬಿನೇಷನ್ ಹೊಂದಿರುವ ಮೆಂತ್ಯ ಸೊಪ್ಪಿನ ದೋಸೆ ಒಂದು ಅತ್ಯುತ್ತಮ ಆಯ್ಕೆ. ಮೆಂತ್ಯ ಸೊಪ್ಪಿನಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ತಂಪು ನೀಡುವುದಲ್ಲದೆ, ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ.

ಬೇಕಾಗುವ ಸಾಮಗ್ರಿಗಳು:

ದೋಸೆ ಹಿಟ್ಟು

ಮೆಂತ್ಯ ಸೊಪ್ಪು

ಹಸಿ ಮೆಣಸಿನಕಾಯಿ

ಶುಂಠಿ ಚೂರು

ಜೀರಿಗೆ

ತುಪ್ಪ ಅಥವಾ ಎಣ್ಣೆ

ಉಪ್ಪು

ಮಾಡುವ ವಿಧಾನ

ಮೊದಲು ಮಿಕ್ಸಿ ಜಾರ್‌ಗೆ ಹೆಚ್ಚಿದ ಮೆಂತ್ಯ ಸೊಪ್ಪು, ಹಸಿ ಮೆಣಸಿನಕಾಯಿ, ಜೀರಿಗೆ ಮತ್ತು ಶುಂಠಿ ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಈ ಹಸಿರು ಮೆಂತ್ಯದ ಪೇಸ್ಟ್ ಅನ್ನು ದೋಸೆ ಹಿಟ್ಟಿಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆ ತವಾವನ್ನು ಚೆನ್ನಾಗಿ ಕಾಯಿಸಿ. ನಂತರ ಒಂದು ದೊಡ್ಡ ಸೌಟು ಹಿಟ್ಟನ್ನು ಹಾಕಿ ವೃತ್ತಾಕಾರದಲ್ಲಿ ಹರಡಿ, ಅದರ ಸುತ್ತಲೂ 1-2 ಚಮಚ ತುಪ್ಪ ಅಥವಾ ಎಣ್ಣೆಯನ್ನು ಸವರಿ. ಎರಡು ಬದಿ ಬೆಂದ ನಂತರ ದೋಸೆಯನ್ನು ರೋಲ್ ಮಾಡಿ ತವಾದಿಂದ ತೆಗೆದರೆ, ಗರಿಗರಿಯಾದ ಮೆಂತ್ಯ ದೋಸೆ ಸಿದ್ಧ.

Must Read