October 15, 2026
Thursday, October 15, 2026
spot_img

ಸಿಎಂ ವಿಜಯ್‌ ಗೆ ಬೆಂಬಲ ಘೋಷಿಸಿದ ಎಎಂಎಂಕೆಯ ಏಕೈಕ ಶಾಸಕ: ಪಕ್ಷದಿಂದ ಉಚ್ಛಾಟಿಸಿದ ಟಿಟಿವಿ ದಿನಕರನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾವೇ ನಡೆಯುತ್ತಿದ್ದು, ಸಿಎಂ ವಿಜಯ್‌ಗೆ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಶಾಸಕನಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ.

ತಮಿಳುನಾಡು ಚುನಾವಣೆಯಲ್ಲಿ AMMK ಪಕ್ಷದಿಂದ ಗೆದ್ದಿದ್ದ ಏಕೈಕ ಶಾಸಕ ಕಾಮರಾಜ್, ತಾನು ಸಿಎಂ ವಿಜಯ್‌ ಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ಎಸ್. ಕಾಮರಾಜ್ ಅವರನ್ನು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಪಕ್ಷದಿಂದ ಉಚ್ಚಾಟಿಸಿದ್ದಾರೆ.

ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ವಿಜಯ್, ನಾಳೆ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ತೋರಿಸಬೇಕಾಗಿದೆ.

Must Read