ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜವಾದಿ ಪಕ್ಷದ ಸಂಸ್ಥಾಪಕ ದಿ. ಮುಲಾಯಂ ಸಿಂಗ್ ಯಾವದ್ ಕಿರಿಯ ಪುತ್ರ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸಹೋದರ ಪ್ರತೀಕ್ ಯಾದವ್ ಇಂದು ಮುಂಜಾನೆ ನಿಧನರಾಗಿದ್ದಾರೆ.
38 ವರ್ಷದ ಪ್ರತೀಕ್ ಬೆಳಗ್ಗೆ ಅಸ್ವಸ್ಥರಾಗಿದ್ದು, ಲಕ್ನೋದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಬರುವ ಮಾರ್ಗಮಧ್ಯೆಯೇ ಪ್ರತೀಕ್ ಪ್ರಾಣ ಹೋಗಿದೆ. ಆಸ್ಪತ್ರೆಯಲ್ಲಿ ಪ್ರತೀಕ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಪ್ರತೀಕ್ ಸಾವಿಗೆ ಕಾರಣ ತಿಳಿದುಬಂದಿಲ್ಲ. ಸದ್ಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಇದರ ನಂತರ ಕಾರಣ ತಿಳಿಯಲಿದೆ. ಸದಾ ಆರೋಗ್ಯದ ಕಡೆ ಗಮನಹರಿಸುವ ಪ್ರತೀಕ್ ನಿಧನದ ಸುದ್ದಿಯನ್ನು ಸ್ನೇಹಿತರು, ಕುಟುಂಬದವರಿಗೆ ಅರಗಿಸಿಕೊಳ್ಳಲು ಆಗಿಲ್ಲ.
ಬಿಜೆಪಿ ನಾಯಕಿ ಅಪರ್ಣಾ ಯಾದವ್ ಪತಿಯಾದ ಪ್ರತೀಕ್ ರಾಜಕೀಯದಿಂದ ದೂರ ಉಳಿದಿದ್ದರು. ಬ್ರಿಟನ್‌ನಲ್ಲಿ ಓದು ಮುಗಿಸಿ ರಿಯಲ್ ಎಸ್ಟೇಟ್ ಹಾಗೂ ಫಿಟ್‌ನೆಸ್ ಬ್ಯುಸಿನೆಸ್‌ನಲ್ಲಿ ಇದ್ದರು.



