May 13, 2026
Wednesday, May 13, 2026
spot_img

ಜೋಸೆಫ್‌ ವಿಜಯ್‌ಗಿಂದು ಫೈನಲ್‌ ಡೇ: ವಿಶ್ವಾಸಮತ ಅಗ್ನಿಪರೀಕ್ಷೆಯಲ್ಲಿ ಪಾಸಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹತ್ತಾರು ರೀತಿಯ ಸರ್ಕಸ್‌ ಮಾಡಿ ಸರ್ಕಾರ ರಚಿಸಿರುವ ಜೋಸೆಫ್‌ ವಿಜಯ್‌ಗೆ ಇಂದು ಫೈನಲ್‌ ಡೇ! ತಮಿಳುನಾಡು ವಿಧಾನಸಭೆಯಲ್ಲಿ ಇಂದು ಬಹುಮತ ಸಾಬೀತು ಮಾಡಬೇಕಿದ್ದು, ಈ ಪರೀಕ್ಷೆಯಲ್ಲಿ ವಿಜಯ್‌ ಗೆಲ್ತಾರಾ? ಇಲ್ಲವಾ? ಕಾದುನೋಡಬೇಕಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡಿ ಇಡೀ ದೇಶವೇ ತಮಿಳುನಾಡಿನತ್ತ ನೋಡುವಂತೆ ಮಾಡಿದ್ದು, ವಿಜಯ್‌! ಇಂದು ವಿಜಯ್‌ಗೆ ನಿರ್ಣಾಯಕ ದಿನವಾಗಿದ್ದು, ತಮ್ಮ ಸರ್ಕಾರಕ್ಕಿರುವ ಬೆಂಬಲವನ್ನು ಸಾಬೀತುಮಾಡಬೇಕಿದೆ.

ಮ್ಯಾಜಿಕ್‌ ನಂಬರ್‌ 118 ಆಗಿದ್ದು, ಈ ಸಂಖ್ಯೆಗೆ ಅನುಗುಣವಾಗಿ ಬೆಂಬಲ ಸಾಬೀತುಪಡಿಸಬೇಕಿದೆ. ವಿಜಯ್‌ ಬಳಿ ಈಗಾಗಲೇ ೧೪೯ ಶಾಸಕರು ಇದ್ದಾರೆ. ಈ ಲೆಕ್ಕಾಚಾರದ ಪ್ರಕಾರ ವಿಜಯ್‌ ಸುಲಭವಾಗಿ ಮ್ಯಾಜಿಕ್‌ ನಂಬರ್‌ನ್ನು ಪಾಸ್‌ ಮಾಡುತ್ತಾರೆ. ಆದರೆ ರಾಜಕೀಯದ ಮ್ಯಾಜಿಕ್‌ನಲ್ಲಿ ಯಾವ ಕ್ಷಣಕ್ಕೆ ಏನು ಬೇಕಾದರೂ ಆಗಬಹುದು.

ವಿಜಯ್‌ ದಳಪತಿ ಆನೆಬಲದೊಂದಿಗೆ ಸರ್ಕಾರ ರಚಿಸುವುದು ಸಾಧ್ಯವಿದೆ. ಈ ಕ್ಷಣಕ್ಕಾಗಿ ತಮಿಳುನಾಡು ಜನತೆ ಎದುರುನೋಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !