ಹೊಸದಿಗಂತ ಡಿಜಿಟಲ್ ಡೆಸ್ಕ್:
ಹತ್ತಾರು ರೀತಿಯ ಸರ್ಕಸ್ ಮಾಡಿ ಸರ್ಕಾರ ರಚಿಸಿರುವ ಜೋಸೆಫ್ ವಿಜಯ್‌ಗೆ ಇಂದು ಫೈನಲ್ ಡೇ! ತಮಿಳುನಾಡು ವಿಧಾನಸಭೆಯಲ್ಲಿ ಇಂದು ಬಹುಮತ ಸಾಬೀತು ಮಾಡಬೇಕಿದ್ದು, ಈ ಪರೀಕ್ಷೆಯಲ್ಲಿ ವಿಜಯ್ ಗೆಲ್ತಾರಾ? ಇಲ್ಲವಾ? ಕಾದುನೋಡಬೇಕಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡಿ ಇಡೀ ದೇಶವೇ ತಮಿಳುನಾಡಿನತ್ತ ನೋಡುವಂತೆ ಮಾಡಿದ್ದು, ವಿಜಯ್! ಇಂದು ವಿಜಯ್‌ಗೆ ನಿರ್ಣಾಯಕ ದಿನವಾಗಿದ್ದು, ತಮ್ಮ ಸರ್ಕಾರಕ್ಕಿರುವ ಬೆಂಬಲವನ್ನು ಸಾಬೀತುಮಾಡಬೇಕಿದೆ.
ಮ್ಯಾಜಿಕ್ ನಂಬರ್ 118 ಆಗಿದ್ದು, ಈ ಸಂಖ್ಯೆಗೆ ಅನುಗುಣವಾಗಿ ಬೆಂಬಲ ಸಾಬೀತುಪಡಿಸಬೇಕಿದೆ. ವಿಜಯ್ ಬಳಿ ಈಗಾಗಲೇ ೧೪೯ ಶಾಸಕರು ಇದ್ದಾರೆ. ಈ ಲೆಕ್ಕಾಚಾರದ ಪ್ರಕಾರ ವಿಜಯ್ ಸುಲಭವಾಗಿ ಮ್ಯಾಜಿಕ್ ನಂಬರ್‌ನ್ನು ಪಾಸ್ ಮಾಡುತ್ತಾರೆ. ಆದರೆ ರಾಜಕೀಯದ ಮ್ಯಾಜಿಕ್‌ನಲ್ಲಿ ಯಾವ ಕ್ಷಣಕ್ಕೆ ಏನು ಬೇಕಾದರೂ ಆಗಬಹುದು.
ವಿಜಯ್ ದಳಪತಿ ಆನೆಬಲದೊಂದಿಗೆ ಸರ್ಕಾರ ರಚಿಸುವುದು ಸಾಧ್ಯವಿದೆ. ಈ ಕ್ಷಣಕ್ಕಾಗಿ ತಮಿಳುನಾಡು ಜನತೆ ಎದುರುನೋಡುತ್ತಿದೆ.



