May 13, 2026
Wednesday, May 13, 2026
spot_img

ಮಧ್ಯರಾತ್ರಿಯಿಂದಲೇ ಚಿನ್ನ, ಬೆಳ್ಳಿ ಬೆಲೆ ಗಗನಕ್ಕೆ! ವಿದೇಶದಲ್ಲಿ ಇಳಿಕೆಯಾದರೂ ಭಾರತದಲ್ಲಿ ಏರಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಆಮದು ಸುಂಕವನ್ನು ದಿಢೀರನೇ ಏರಿಕೆ ಮಾಡಿರುವ ಕಾರಣ, ಮಾರುಕಟ್ಟೆಯಲ್ಲಿ ಈ ಅಮೂಲ್ಯ ಲೋಹಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.

ಕೇಂದ್ರ ಸರ್ಕಾರವು ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 6 ರಿಂದ ಶೇ. 15ಕ್ಕೆ ಹೆಚ್ಚಿಸಿದೆ. ಅಂದರೆ ಒಮ್ಮೆಗೆ ಶೇ. 9ರಷ್ಟು ಸುಂಕ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ಮಾರುಕಟ್ಟೆಯಲ್ಲಿ ಬೆಲೆಗಳು ಶೇ. 6ರಷ್ಟು ಜಿಗಿತ ಕಂಡಿವೆ.

ಜ್ಯುವೆಲರಿ ಅಸೋಸಿಯೇಶನ್ ನೀಡಿರುವ ಮಾಹಿತಿಯ ಪ್ರಕಾರ, ಬೆಲೆಗಳಲ್ಲಿ ಈ ಕೆಳಗಿನಂತೆ ಬದಲಾವಣೆಯಾಗಿದೆ:

ಆಭರಣ ಚಿನ್ನ (1 ಗ್ರಾಂ): ಬೆಲೆಯಲ್ಲಿ 1,275 ರೂ. ಏರಿಕೆಯಾಗಿದೆ.

22 ಕ್ಯಾರಟ್ ಚಿನ್ನ (10 ಗ್ರಾಂ): 1,53,900 ರೂಪಾಯಿ.

24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಂ): 1,67,890 ರೂಪಾಯಿ.

ಬೆಳ್ಳಿ (100 ಗ್ರಾಂ): ಬೆಲೆಯಲ್ಲಿ 20 ರೂ. ಏರಿಕೆಯಾಗಿದ್ದು, ಪ್ರಸ್ತುತ 31,000 ರೂಪಾಯಿ ಇದೆ.

ಕುತೂಹಲಕಾರಿ ಸಂಗತಿಯೆಂದರೆ, 2024-25ರ ಬಜೆಟ್‌ನಲ್ಲಿ ಆಮದು ಸುಂಕವನ್ನು ಶೇ. 15ರಿಂದ ಶೇ. 6ಕ್ಕೆ ಇಳಿಸುವ ಮೂಲಕ ಜನಸಾಮಾನ್ಯರಿಗೆ ನೆಮ್ಮದಿ ನೀಡಲಾಗಿತ್ತು. ಆದರೆ, ಕೇವಲ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ಮತ್ತೆ ಹಳೆಯ ದರಕ್ಕೆ (ಶೇ. 15) ಸುಂಕವನ್ನು ಏರಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಮುಖವಾಗುತ್ತಿದ್ದರೂ, ಭಾರತದಲ್ಲಿ ಸುಂಕದ ಹೆಚ್ಚಳದಿಂದಾಗಿ ಆಭರಣಗಳ ಖರೀದಿ ಈಗ ದುಬಾರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !