May 14, 2026
Thursday, May 14, 2026
spot_img

ಒಂದೇ ಮಳೆಗೆ ಅಲ್ಲೋಲ ಕಲ್ಲೋಲವಾಯ್ತು ಉತ್ತರಪ್ರದೇಶ, ಬಿರುಗಾಳಿ ದಾಳಿಗೆ 54 ಮಂದಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ನಿನ್ನೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, 54 ಮಂದಿ ಮೃತಪಟ್ಟಿದ್ದಾರೆ.

ಭದೋಹಿ, ಫತೇಪುರ್‌, ಬುದೌನ್‌ ಹಾಗೂ ಇನ್ನೆರಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು, ಜನರ ಜೀವನವೇ ಹೈರಾಣಾಗಿದೆ. ಪ್ರಯೋಗ್‌ರಾಜ್‌ನಲ್ಲಿ 16 ಮಂದಿ ಪ್ರಾಣಬಿಟ್ಟಿದ್ದಾರೆ.

ಭದೋನಿ ಜಿಲ್ಲೆಯಲ್ಲಿ 16 ಮಂದಿ, ಫತೇಪುರ ಜಿಲ್ಲೆಯಲ್ಲಿ ಒಂಬತ್ತು, ಉನ್ನಾವೊದಲ್ಲಿ ನಾಲ್ಕು ಮಂದಿ, ಕಾನ್ಪುರ ದೇಹತ್‍ನಲ್ಲಿ ಮೂವರು, ಬುದೌನ್ ಜಿಲ್ಲೆಯಲ್ಲಿ ಐದು ಮಂದಿ, ಚಂದೌಲಿಯಲ್ಲಿ ಇಬ್ಬರು, ಸೋನಭದ್ರಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುತ್ತೇವೆ, ಪರಿಹಾರ ಒದಗಿಸುತ್ತೇವೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಸಿಡಿಲು, ಮನೆಯ ಗೋಡೆ ಕುಸಿತ,ಮರ ಕುಸಿತ, ಅಪಘಾತ ಇನ್ನಿತರ ಅವಘಡಗಳಿಂದ ಜನರು ಮೃತಪಟ್ಟಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !