May 16, 2026
Saturday, May 16, 2026
spot_img

ಬರೀ ನಿಮ್ಮಮ್ಮನ ಫೋಟೊ ಹಾಕ್ತೀಯ, ಸ್ಟೇಟಸ್‌ಗೆ ನಮ್ಮಮ್ಮನ ಫೋಟೊನೂ ಹಾಕು ಎಂದು ಪತ್ನಿಗೆ ಹೊಡೆದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಾಯಂದಿರ ದಿನದಂದು ಹೆತ್ತ ತಾಯಿಗೆ ಶುಭ ಕೋರಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದೇ ಮಹಿಳೆಯೊಬ್ಬರ ಮೇಲೆ ಪತಿ ಕ್ರೂರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಬೈಲಕೋನೇನಹಳ್ಳಿಯ ನಿವಾಸಿ ಯಮುನಾ (26) ಎಂಬ ಗೃಹಿಣಿ, ಮೇ 10 ರಂದು ಅಂತಾರಾಷ್ಟ್ರೀಯ ತಾಯಂದಿರ ದಿನದಂದು ತನ್ನ ಹೆತ್ತ ತಾಯಿಯ ಫೋಟೋವನ್ನು ವಾಟ್ಸಾಪ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದರಿಂದ ಕೋಪಗೊಂಡ ಆಕೆಯ ಪತಿ ಪ್ರದೀಪ್ ಕುಮಾರ್, ಕುಡಿದು ಮನೆಗೆ ಬಂದು ತನ್ನ ತಾಯಿಗೂ ಅದೇ ರೀತಿಯ ಗೌರವ ನೀಡಬೇಕೆಂದು ಗಲಾಟೆ ಮಾಡಿ, ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

ಈ ದೌರ್ಜನ್ಯಕ್ಕೆ ಅತ್ತೆಯೂ ಸಾಥ್ ನೀಡಿದ್ದು, ಸದ್ಯ ಸಂತ್ರಸ್ತೆ ಚಿಕಿತ್ಸೆಯ ನಂತರ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪತಿ ಮತ್ತು ಅತ್ತೆಯ ವಿರುದ್ಧ ದೈಹಿಕ, ಮಾನಸಿಕ ಕಿರುಕುಳ ಹಾಗೂ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆ. ಈ ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮಾದನಾಯಕನಹಳ್ಳಿ ಪೋಲೀಸರು ಪತಿಗೆ ನೋಟಿಸ್ ಜಾರಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !