ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಂಗೆಟ್ಟಿರುವ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತ್ತೆ ತಮ್ಮ ಪಕ್ಷ ತೃಣಮೂಲ ಕಾಂಗ್ರೆಸ್ ಅನ್ನು ಸಂಘಟಿಸುತ್ತ ಮುಂದಾಗಿದ್ದಾರೆ.
ಈ ಹಿನ್ನೆಲೆ ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪರಾಜಿತ ಅಭ್ಯರ್ಥಿಗಳು ಮತ್ತು ಹಿರಿಯ ನಾಯಕರ ಜೊತೆ ತುರ್ತು ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ದೀದಿ, ಪಕ್ಷ ತೊರೆದು ಹೋಗುವವರು ಹೋಗಬಹುದು, ಯಾರನ್ನೂ ತಡೆಯುವುದಿಲ್ಲ. ನಾನು ಮತ್ತೆ ಪಕ್ಷವನ್ನು ಕಟ್ಟುತ್ತೇನೆ. ಪಕ್ಷದಲ್ಲಿ ಇರುವವರು ಧ್ವಂಸವಾಗಿರುವ ನಮ್ಮ ಕಚೇರಿಯನ್ನು ಸರಿಪಡಿಸಿ ಮತ್ತೆ ಜನರಿಗೆ ಮುಕ್ತಗೊಳಿಸಬೇಕು. ಹೋಗಲು ಬಯಸುವವರು ಹೋಗಲಿ. ಆದರೆ ನಾನು ಯಾರಿಗೂ ತಲೆಬಾಗುವುದಿಲ್ಲ ಎಂದು ಗುಡುಗಿದರು.
ಸಭೆಯ ನಂತರ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ ಟಿಎಂಸಿ, ಯಾವ ದಬ್ಬಾಳಿಕೆ ಮತ್ತು ಬೆದರಿಕೆಗಳಿಗೆ ನಾವು ಜಗ್ಗಲ್ಲ. ಎಲ್ಲವನ್ನೂ ಧೈರ್ಯದಿಂದ ಹೋರಾಡುತ್ತೇವೆ. ಟಿಎಂಸಿ ಒಂದೇ ಕುಟುಂಬವಾಗಿ ನಿಲ್ಲಲಿದೆ. ಜನರ ತೀರ್ಪನ್ನು ಲೂಟಿ ಮಾಡಿದವರ ಮುಂದೆ ಮಂಡಿಯೂರುವುದಿಲ್ಲ. ಸತ್ಯಕ್ಕೆ ಜಯ ಸಿಗಲಿದೆ ಎಂದು ಬರೆದುಕೊಂಡಿದೆ



