May 17, 2026
Sunday, May 17, 2026
spot_img

Fact | ಮಕ್ಕಳಿಗೆ ಟೀ-ಕಾಫಿ ಕುಡಿಸುವುದು ಒಳ್ಳೆಯದೇ? ಪೋಷಕರು ತಿಳಿಯಲೇಬೇಕಾದ ವಿಷಯವಿದು

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಬೆಳಗಿನ ಅವಧಿಯಲ್ಲಿ ಟೀ ಅಥವಾ ಕಾಫಿ ಕುಡಿಯುವುದು ನಮ್ಮ ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿ ದೊಡ್ಡವರು ಟೀ ಕುಡಿಯುವುದನ್ನು ನೋಡಿ ಸಣ್ಣ ಮಕ್ಕಳೂ ಕೂಡ ತಮಗೂ ಟೀ ಬೇಕೆಂದು ಹಠ ಮಾಡುವುದು ಸಹಜ. ಇಂತಹ ಸಂದರ್ಭಗಳಲ್ಲಿ ಅನೇಕ ಪೋಷಕರು ಪ್ರೀತಿಯಿಂದ ಅಥವಾ ಮಗುವಿನ ಹಠಕ್ಕೆ ಮಣಿದು ಹಾಲಿನ ಜೊತೆ ಸ್ವಲ್ಪ ಟೀ ಬೆರೆಸಿ ನೀಡುತ್ತಾರೆ. ಆದರೆ, ಹಿರಿಯರ ಆರೋಗ್ಯಕ್ಕೆ ಆಚೀಚೆ ಎನಿಸದ ಚಹಾ, ಮಕ್ಕಳ ಸೂಕ್ಷ್ಮ ದೇಹದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಬಲ್ಲದು. ಆದ್ದರಿಂದ, ಮಕ್ಕಳಿಗೆ ಟೀ ಕುಡಿಸುವುದು ಎಷ್ಟು ಮಟ್ಟಿಗೆ ಸುರಕ್ಷಿತ ಮತ್ತು ಅದು ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಪ್ರತಿಯೊಬ್ಬ ಪೋಷಕರು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಮಕ್ಕಳಿಗೆ ಟೀ ಕುಡಿಸುವುದರಿಂದ ಆಗುವ ಆರೋಗ್ಯ ಸಮಸ್ಯೆಗಳು ಇಲ್ಲಿವೆ:


ಟೀಯಲ್ಲಿ ‘ಟ್ಯಾನಿನ್’ ಎಂಬ ರಾಸಾಯನಿಕ ಪದಾರ್ಥವಿರುತ್ತದೆ. ಇದು ಮಕ್ಕಳು ಸೇವಿಸುವ ಆಹಾರದಲ್ಲಿರುವ ಕಬ್ಬಿಣದ ಅಂಶವನ್ನುದೇಹವು ಹೀರದಂತೆ ತಡೆಯುತ್ತದೆ. ಇದರಿಂದಾಗಿ ಮಕ್ಕಳಲ್ಲಿ ರಕ್ತದ ಕೊರತೆ ಅಥವಾ ರಕ್ತಹೀನತೆ ಉಂಟಾಗುತ್ತದೆ.

ಟೀಯಲ್ಲಿರುವ ಕೆಫೀನ್ ಒಂದು ಉತ್ತೇಜಕವಾಗಿದೆ. ಇದು ಮಕ್ಕಳ ಸಣ್ಣ ಮೆದುಳಿನ ಮೇಲೆ ಅತಿಯಾದ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ, ಸದಾ ಕಿರಿಕಿರಿ, ಅತಿಯಾದ ಚಡಪಡಿಕೆ ಮತ್ತು ಏಕಾಗ್ರತೆಯ ಕೊರತೆ ಎದುರಾಗುತ್ತದೆ.

ಮಕ್ಕಳಿಗೆ ಬೆಳಗ್ಗೆ ಅಥವಾ ಸಂಜೆ ಟೀ ಜೊತೆ ಬಿಸ್ಕತ್ ನೀಡಿದಾಗ ಅವರ ಹಸಿವು ಸಂಪೂರ್ಣವಾಗಿ ಸಾಯುತ್ತದೆ. ಇದರ ಪರಿಣಾಮವಾಗಿ ಅವರು ಅನ್ನ, ಬೇಳೆಕಾಳು, ತರಕಾರಿಗಳಂತಹ ಪೌಷ್ಟಿಕ ಆಹಾರ ತಿನ್ನಲು ನಿರಾಕರಿಸುತ್ತಾರೆ, ಇದು ಅವರ ನೈಸರ್ಗಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಟೀ ಕುಡಿಯುವುದರಿಂದ ದೇಹದಲ್ಲಿರುವ ಕ್ಯಾಲ್ಸಿಯಂ ಮೂಳೆಗಳಿಗೆ ಸೇರದೇ ಮೂತ್ರದ ಮೂಲಕ ಹೊರಹೋಗುತ್ತದೆ. ಇದು ಮಕ್ಕಳ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಟೀಗೆ ಹಾಕುವ ಸಕ್ಕರೆಯು ಮಕ್ಕಳ ಹಲ್ಲುಗಳಲ್ಲಿ ಹುಳುಕಾಗಲು ಕಾರಣವಾಗುತ್ತದೆ.

ಟೀ ಒಂದು ನೈಸರ್ಗಿಕ ಮೂತ್ರವರ್ಧಕ ಆಗಿರುವುದರಿಂದ, ಇದನ್ನು ಕುಡಿದರೆ ಮಕ್ಕಳು ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುತ್ತಾರೆ. ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ನಿರ್ಜಲೀಕರಣ ಉಂಟಾಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !