ಹೊಸದಿಗಂತ ಡಿಜಿಟಲ್ ಡೆಸ್ಕ್:
ನನಗೆ ತುಂಬಾ ಅಹಂಕಾರ ಇದೆ ಅಂತ ಹೇಳ್ತಿದ್ದಾರೆ. ಪರವಾಗಿಲ್ಲ, ನನ್ನಲ್ಲಿ ಮದ ಇದ್ದರೆ ಇಳಿಸಲಿ ಯಾರು ಬೇಡ ಅನ್ನೋದಿಲ್ಲ. ನಾನು ಸ್ವಾಮೀಜಿಗಳು ನನ್ನ ಸೇವೆ ಮಾಡಬೇಕು ಎಂದು ಹೇಳಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದದಲ್ಲಿ ಮಾತನಾಡಿ, ಲಿಂಗಾಯತ ಸ್ವಾಮೀಜಿಗಳು ನನ್ನ ಸೇವೆ ಮಾಡಬೇಕು ಎಂದು ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಯಾವ ಸ್ವಾಮೀಜಿಗೂ ಅಗೌರವ ತರುವಂತ ಮಾತುಗಳು ನನ್ನ ಬಾಯಿಂದ ಬರೋದಕ್ಕೆ ಸಾಧ್ಯವೇ ಇಲ್ಲ. ಜನರಿಗೆ, ಪ್ರತಿನಿಧಿಗಳಿಗೆ ಹಾಗೂ ಮತದಾರರಿಗೆ ಈ ಮಾತು ಉದ್ದೇಶವಾಗಿತ್ತು. ಅವರ ಸೇವೆ ಮಾಡಬೇಕು, ರಕ್ಷಣ ಮಾಡಬೇಕು ನಮ್ಮ ಸರ್ಕಾರ ಸೇವೆಗೆ ಸಿದ್ಧ ಎಂದು ಹೇಳಿದ್ದೆ ಎಂದಿದ್ದಾರೆ.
ಈ ರಾಜ್ಯದಲ್ಲಿ ಯಾರಿಗೆ ಮಠಗಳ ಮೇಲೆ ಗೌರವ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನನಗೊಂದು ತುಂಬಾನೇ ಗೌರವ ಇದೆ. ಪಂಚಪೀಠದವರು ಆಗಮಿಸಿದಾಗ ಭಕ್ತಿಯಿಂದ ಪಾದಗಳಿಗೆ ನಮಸ್ಕರಿಸಿದ್ದೇನೆ. ನಾನು ದೈವ ಭಕ್ತ, ಒಳಿತಿನ ಭಕ್ತ, ನಮ್ಮ ಧರ್ಮಕ್ಕೆ ಜಯವಾಗಲಿ ಎಂದಿದ್ದಾರೆ.



