May 19, 2026
Tuesday, May 19, 2026
spot_img

ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ: ಗ್ರೀನ್ ಜೋನ್‌ಗೆ ಮರಳಿದ ಉದ್ಯಾನನಗರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ನಗರದ ವಾಯುಮಾಲಿನ್ಯ ಗಣನೀಯವಾಗಿ ಇಳಿಕೆಯಾಗಿದ್ದು, ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಸುಧಾರಿಸಿದೆ. ನಿನ್ನೆ ನಗರದ ಪ್ರಮುಖ ಹಸಿರು ವಲಯಗಳಲ್ಲಿ ವಾಯು ಗುಣಮಟ್ಟವು ಶ್ರೇಷ್ಠ ಮಟ್ಟಕ್ಕೆ ತಲುಪಿದೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಪ್ರಕಾರ, ಬೆಂಗಳೂರಿನ ಸರಾಸರಿ AQI ಇಂದು 55 ರಿಂದ 65 ರ ಆಸುಪಾಸಿನಲ್ಲಿದ್ದು, ಇದು ‘ಸಾಧಾರಣ’ ವಲಯಕ್ಕೆ ಸೇರಿದೆ. ನಗರದ ಪ್ರಮುಖ ಐಟಿ ಹಬ್‌ಗಳಾದ ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಮತ್ತು ಬಿಟಿಎಂ ಲೇಔಟ್‌ಗಳಲ್ಲಿ ವಾಹನ ಸಂಚಾರ ದಟ್ಟಣೆ ಇದ್ದರೂ ಮಳೆಯ ಪ್ರಭಾವದಿಂದಾಗಿ AQI 60ರ ಒಳಗೇ ದಾಖಲಾಗಿದೆ. ಇನ್ನು ಲಾಲ್‌ಬಾಗ್, ಜಯನಗರ ಮತ್ತು ಕಬ್ಬನ್ ಪಾರ್ಕ್ ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 45 ಕ್ಕಿಂತ ಕಡಿಮೆ ದಾಖಲಾಗುವ ಮೂಲಕ ಬೆಂಗಳೂರಿಗರಿಗೆ ಶುದ್ಧ ಗಾಳಿಯ ನಿಟ್ಟುಸಿರು ತಂದಿದೆ.

ಸಾಮಾನ್ಯವಾಗಿ ಬೇಸಿಗೆಯ ಕೊನೆಯಲ್ಲಿ ಧೂಳಿನ ಪ್ರಮಾಣ ಹೆಚ್ಚಿರುತ್ತಿತ್ತು. ಆದರೆ ಈ ಬಾರಿ ಅವಧಿಗೆ ಮುನ್ನವೇ ಸುರಿದ ವರುಣನ ಆರ್ಭಟಕ್ಕೆ ಗಾಳಿಯಲ್ಲಿದ್ದ ಹಾನಿಕಾರಕ PM2.5 ಮತ್ತು PM10 ಸೂಕ್ಷ್ಮ ಕಣಗಳು ನೆಲಕಚ್ಚಿವೆ. ಇದು ಉಸಿರಾಟದ ತೊಂದರೆ ಮತ್ತು ಅಸ್ತಮಾ ಇರುವವರಿಗೆ ದೊಡ್ಡ ಮಟ್ಟದ ರಿಲೀಫ್ ನೀಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕರಾವಳಿಯ ಮಂಗಳೂರಿನಲ್ಲಿಯೂ ಸಮುದ್ರದ ಗಾಳಿಯ ಕಾರಣದಿಂದಾಗಿ ಅತ್ಯಂತ ಆರೋಗ್ಯಕರವಾದ 35 AQI ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !