ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿ ಇಂದು ತಮ್ಮ 23ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಸಂಭ್ರಮಕ್ಕಿಂತ ಭಾವುಕತೆ ಹೆಚ್ಚು ಗಮನ ಸೆಳೆದಿದೆ.
ಜೈಲಿನಲ್ಲಿರುವ ದರ್ಶನ್‌ರನ್ನು ನೆನೆದು ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಅಭಿಮಾನಿಗಳ ಮನಮುಟ್ಟಿದೆ.
ವಿಜಯಲಕ್ಷ್ಮಿ ಭಾವುಕ ಸಂದೇಶ
ಹಿಂದಿನ ವಾರ್ಷಿಕೋತ್ಸವದ ಫೋಟೋಗಳನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ, “ಸಂದರ್ಭಗಳು ನಮ್ಮನ್ನು ದೂರ ಮಾಡಿದರೂ ನನ್ನ ಹೃದಯ ಯಾವಾಗಲೂ ನಿನ್ನನ್ನೇ ಆರಿಸಿಕೊಳ್ಳುತ್ತದೆ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ದಂಪತಿಗೆ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ:
ಜೈಲಿನಲ್ಲಿ ವಿಶೇಷ ಭೇಟಿಗೆ ಅವಕಾಶ
ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಮಗನ ಭೇಟಿಗೆ ಅವಕಾಶ ನೀಡುವಂತೆ ದರ್ಶನ್ ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಬಳಿಕ ವಿಜಯಲಕ್ಷ್ಮಿಯೂ ಅಧಿಕಾರಿಗಳನ್ನು ಭೇಟಿ ಮಾಡಿ ಅನುಮತಿ ಕೋರಿದ್ದರು. ಮನವಿಗೆ ಸ್ಪಂದಿಸಿದ ಜೈಲು ಆಡಳಿತ, ನಿಯಮಾನುಸಾರ ಒಳ ಸಂದರ್ಶನಕ್ಕೆ ಅವಕಾಶ ನೀಡಿದೆ.
30 ನಿಮಿಷ ಭೇಟಿಗೆ ಅನುಮತಿ
ಜೈಲು ನಿಯಮದ ಪ್ರಕಾರ ಮಾನಸಿಕ ಒತ್ತಡದಲ್ಲಿರುವ ಕೈದಿಗಳಿಗೆ ವಿಶೇಷ ಭೇಟಿಗೆ ಅವಕಾಶವಿದೆ. ಇದೇ ಕಾರಣದಿಂದ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್‌ಗೆ ಸುಮಾರು 30 ನಿಮಿಷಗಳ ಕಾಲ ದರ್ಶನ್ ಅವರನ್ನು ಭೇಟಿ ಮಾಡಲು ಅನುಮತಿ ನೀಡಲಾಗಿದೆ.



