May 19, 2026
Tuesday, May 19, 2026
spot_img

ಸಿಎಸ್‌ಕೆ ನಾಯಕತ್ವಕ್ಕೆ ಕಂಟಕ?: ಗಾಯಕ್ವಾಡ್‌ ಬದಲು ಆತನಿಗೆ ಕ್ಯಾಪ್ಟನ್ಸಿ ನೀಡಿ ಎಂದ ಮಾಜಿ ಕ್ರಿಕೆಟಿಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಸ್‌ಕೆ ತಂಡದ ಪ್ಲೇಆಫ್ ಕನಸು ಈ ಬಾರಿಯ ಐಪಿಎಲ್‌ನಲ್ಲಿ ಬಹುತೇಕ ಕೈ ತಪ್ಪಿದಂತಾಗಿದೆ. ಸತತ ಕಳಪೆ ಪ್ರದರ್ಶನದಿಂದ ತಂಡ ಒತ್ತಡಕ್ಕೆ ಸಿಲುಕಿದ್ದು, ಇದೀಗ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗಿವೆ. ತಂಡದ ಪ್ರದರ್ಶನದ ಜೊತೆಗೆ ನಾಯಕ ಋತುರಾಜ್ ಗಾಯಕ್ವಾಡ್‌ ಬ್ಯಾಟಿಂಗ್ ವೈಫಲ್ಯವೂ ಟೀಕೆಗೆ ಕಾರಣವಾಗಿದೆ.

ಗಾಯಕ್ವಾಡ್‌ಗೆ ತಿವಾರಿ ಸಲಹೆ

ಟೀಮ್ ಇಂಡಿಯಾದ ಮಾಜಿ ಆಟಗಾರ ಮನೋಜ್ ತಿವಾರಿ, ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಮಹತ್ವದ ಸಲಹೆ ನೀಡಿದ್ದಾರೆ. ಗಾಯಕ್ವಾಡ್ ನಾಯಕತ್ವದಿಂದ ಹಿಂದೆ ಸರಿದು ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚು ಗಮನಹರಿಸಬೇಕು ಎಂದು ಹೇಳಿದ್ದಾರೆ. 13 ಇನ್ನಿಂಗ್ಸ್‌ಗಳಲ್ಲಿ ಕೇವಲ 321 ರನ್ ಹಾಗೂ ಕಡಿಮೆ ಸ್ಟ್ರೈಕ್ ರೇಟ್ ತಂಡಕ್ಕೆ ಹಿನ್ನಡೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ಸಂಜು ಸ್ಯಾಮ್ಸನ್ ಹೆಸರು ಚರ್ಚೆಯಲ್ಲಿ

ಮುಂದಿನ ಸೀಸನ್‌ಗೆ ಸಂಜು ಸ್ಯಾಮ್ಸನ್ ಅವರನ್ನು ನಾಯಕತ್ವದ ಆಯ್ಕೆಯಾಗಿ ಪರಿಗಣಿಸಬಹುದು ಎಂದು ತಿವಾರಿ ಹೇಳಿದ್ದಾರೆ. ಒಬ್ಬ ನಾಯಕ ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ತಂಡವನ್ನು ಧೈರ್ಯವಾಗಿ ಮುನ್ನಡೆಸಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಧೋನಿ ಸ್ಥಾನ ತುಂಬೋದು ಕಷ್ಟ

ಸಿಎಸ್‌ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲಮಿಂಗ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧೋನಿ ಅವರಂತಹ ನಾಯಕನ ಸ್ಥಾನವನ್ನು ತುಂಬುವುದು ಸುಲಭವಲ್ಲ ಎಂದು ಹೇಳಿದ ಅವರು, ಗಾಯಕ್ವಾಡ್ ಇನ್ನೂ ಅನುಭವ ಪಡೆಯಬೇಕಿದೆ ಎಂದು ಸೂಚಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !