May 19, 2026
Tuesday, May 19, 2026
spot_img

ದೆಹಲಿ ಕಡೆ ಪುಟಿನ್ ನಡೆ: ಭಾರತ-ರಷ್ಯಾ ಬಾಂಧವ್ಯಕ್ಕೆ ಮತ್ತಷ್ಟು ಬಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದೇ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ ನಡೆಯಲಿರುವ BRICS ಶೃಂಗಸಭೆಯಲ್ಲಿ ಭಾಗವಹಿಸಲು ಅವರು ಆಗಮಿಸಲಿದ್ದಾರೆ.

ಒಂದೇ ವರ್ಷದ ಅವಧಿಯಲ್ಲಿ ಎರಡನೇ ಬಾರಿ ಭಾರತಕ್ಕೆ ಬರುತ್ತಿರುವುದು ಉಭಯ ರಾಷ್ಟ್ರಗಳ ಬಲವಾದ ರಾಜತಾಂತ್ರಿಕ ಸಂಬಂಧವನ್ನು ಮತ್ತೊಮ್ಮೆ ಹೈಲೈಟ್ ಮಾಡಿದೆ.

ಮೋದಿ-ಪುಟಿನ್ ದ್ವಿಪಕ್ಷೀಯ ಸಭೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ನಡುವೆ ವಿಶೇಷ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ರೂಪಾಯಿ-ರೂಬಲ್ ವ್ಯಾಪಾರ ವಿಸ್ತರಣೆ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಜಾಗತಿಕ ರಾಜಕೀಯ ಒತ್ತಡಗಳ ನಡುವೆಯೂ ಉಭಯ ದೇಶಗಳು ಆರ್ಥಿಕ ಸಹಕಾರವನ್ನು ಬಲಪಡಿಸಲು ಮುಂದಾಗಿವೆ.

ಇಂಧನ ಮತ್ತು ರಕ್ಷಣಾ ಸಹಕಾರಕ್ಕೆ ಒತ್ತು

ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ, ಕಲ್ಲಿದ್ದಲು ಹಾಗೂ ರಸಗೊಬ್ಬರ ಪೂರೈಕೆ ನಿರಂತರವಾಗಿರಲು ಚರ್ಚೆ ನಡೆಯಲಿದೆ. ಜೊತೆಗೆ ಎಸ್-400 ಕ್ಷಿಪಣಿ ವ್ಯವಸ್ಥೆ ಸೇರಿದಂತೆ ರಕ್ಷಣಾ ತಂತ್ರಜ್ಞಾನ ಸಹಕಾರದ ವಿಷಯವೂ ಪ್ರಮುಖ ಅಜೆಂಡಾದಲ್ಲಿದೆ.

ಇದನ್ನೂ ಓದಿ:

ಜಾಗತಿಕ ಗಮನ ಸೆಳೆದ ಸ್ನೇಹ

ಇತ್ತೀಚೆಗೆ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಭಾರತಕ್ಕೆ ಭೇಟಿ ನೀಡಿದ ಬಳಿಕ ಉಭಯ ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡಗಳ ನಡುವೆಯೂ ಭಾರತ-ರಷ್ಯಾ ಸ್ನೇಹ ಮುಂದುವರಿಯುತ್ತಿರುವುದು ಜಾಗತಿಕವಾಗಿ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !