July 18, 2026
Saturday, July 18, 2026
spot_img

ಆರೆಸ್ಸೆಸ್ ಹಿರಿಯ ಕಾರ್ಯಕರ್ತ ಮಾರುತಿ ಕೇಶವ ನಾಯಕ ವಿಧಿವಶ

ಹೊಸದಿಗಂತ ವರದಿ, ಅಂಕೋಲಾ:

ಆರೆಸ್ಸೆಸ್ ಹಿರಿಯ ಕಾರ್ಯಕರ್ತ ಮಾರುತಿ ಕೇಶವ ನಾಯಕ (69) ಮಂಗಳವಾರ ಸಂಜೆ ನಿಧನರಾದರು.

ಇಲ್ಲಿಯ ಮಠಾಕೇರಿ ನಿವಾಸಿಯಾಗಿರುವ ಇವರು ಸಂಘದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ವಿ.ಹಿಂ. ಪ, ಹಿಂದು ಜಾಗರಣ ವೇದಿಕೆ ಸೇರಿ ವಿವಿಧ ಸಂಘಟನೆಗಳಲ್ಲಿ ಜವಾಬ್ದಾರಿ ಹೊಂದಿದ್ದರು.

ಸಂಗೀತ ಸಂಸ್ಥೆ ಗೀತ ಭಾರತಿಯ ಅಧ್ಯಕ್ಷರಾಗಿದ್ದರು. ಶ್ರೀ ವೀರವಿಠ್ಠಲ ಮಠ ಕಮಿಟಿಯ ಕಾರ್ಯದರ್ಶಿಯಾಗಿ, ವೀರವಿಠ್ಠಲ ಯುವಕ ಮಂಡಳದ ಕಾರ್ಯದರ್ಶಿ, ಖಜಾಂಚಿಯಾಗಿ, ಅಸ್ನೋಟಿ ಶ್ರೀ ಗಣಪತಿ ರವಳನಾಥ ಮಹಾಮಾಯಾ ದೇವಸ್ಥಾನದ ಟ್ರಸ್ಟಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸಿದ್ದ ನಾಯಕ ಕೋಲ್ಡ್ರಿಂಕ್ಸ್ ಮಾಲಕರಾಗಿದ್ದರು.

ಪತ್ನಿ, ಪುತ್ರಿ, ಪುತ್ರ ಮತ್ತು ಅಪಾರ ಬಂಧುಬಳಗವನ್ನು ಬಿಟ್ಟಗಲಿದ್ದಾರೆ.

ಗಣ್ಯರ ಸಂತಾಪ

ಮಾರುತಿ ನಾಯಕರ ನಿಧನಕ್ಕೆ ಶ್ರೀ ವೀರವಿಠ್ಠಲ ಮಠ ಕಮಿಟಿ, ಯುವಕ ಮಂಡಳ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ವಿವಿಧ ಪ್ರಮುಖರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !