October 18, 2026
Sunday, October 18, 2026
spot_img

ವೈದ್ಯರು ಶಕ್ತಿ ಮೀರಿ ಪ್ರಯತ್ನ ಮಾಡ್ತಿದ್ದಾರೆ, ಇನ್ನು ನಮಗೆ ದೇವರೇ ದಿಕ್ಕು: ಕಣ್ಣೀರಿಟ್ಟ ಎಚ್‌ಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮಣಿಪಾಲ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಯಿಂದ ಹೊರಕ್ಕೆ ಬಂದ ದೇವೇಗೌಡರು ಹಾಗೂ ಎಚ್‌.ಡಿ. ಕುಮಾರಸ್ವಾಮಿ ಮಾಧ್ಯಮದ ಮುಂದೆ ಗಳಗಳನೆ ಅತ್ತಿದ್ದಾರೆ. ಅಮ್ಮನ ಆರೋಗ್ಯ ಕ್ಷೀಣಿಸುತ್ತಿದೆ. ವೈದ್ಯರು ತಮ್ಮ ಕೈಲಾದ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮಗೆ ಆ ತಾಯಿ ರಾಜರಾಜೇಶ್ವರಿಯೇ ಗತಿ ಎಂದು ಗದ್ಗದಿತರಾಗಿದ್ದಾರೆ.

25 ವರ್ಷಗಳ ಹಿಂದೆ ಅಮ್ಮನ ಮೇಲೆ ಆಸಿಡ್‌ ದಾಳಿ ಆಗಿತ್ತು. ಆಗಲೂ ವೈದ್ಯರು ಇವರು ಬದುಕುವುದಿಲ್ಲ ಎಂದು ಹೇಳಿದ್ದರು. ಆದರೆ ನಾವೆಲ್ಲರೂ ದೇವರಿಗೆ ಪ್ರಾರ್ಥಿಸಿದ್ದೆವು. ಅಮ್ಮ ಉಳಿದಿದ್ದರು. ಈಗಲೂ ನಾವು ರಾಜರಾಜೇಶ್ವರಿ ತಾಯಿಯ ಮೇಲೆ ಭಾರ ಹಾಕಿದ್ದೇವೆ. ಈಗಲೂ ಗುಣಮುಖರಾಗಿ ಮನೆಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.

Must Read