ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಟಲಿ ಪ್ರವಾಸದ ವೇಳೆ ಪ್ರಧಾನಿ ಮೋದಿ, ಜಾರ್ಜಿಯಾ ಮೆಲೋನಿಗೆ ಮೆಲೋಡಿ ಚಾಕೊಲೇಟ್ ಉಡುಗೊರೆಯಾಗಿ ನೀಡಿದ ವಿಚಾರವನ್ನೇ ಟೀಕಿಸಿದ ರಾಹುಲ್, ದೇಶ ಸಂಕಷ್ಟದಲ್ಲಿರುವಾಗ ಇದು ನಾಯಕತ್ವವಲ್ಲ, ನಾಟಕ ಎಂದು ಕಿಡಿಕಾರಿದ್ದಾರೆ.
‘ದೇಶ ಕಷ್ಟದಲ್ಲಿದೆ, ಪ್ರಧಾನಿ ರೀಲ್ಸ್‌ನಲ್ಲಿ ಬ್ಯುಸಿ’
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ರೈತರು, ಯುವಕರು, ಮಹಿಳೆಯರು ಮತ್ತು ಸಣ್ಣ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಪ್ರಧಾನಿ ವಿದೇಶ ಪ್ರವಾಸಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ದೇಶದ ಆರ್ಥಿಕ ಪರಿಸ್ಥಿತಿ ಗಂಭೀರವಾಗುತ್ತಿರುವಾಗ ಸರ್ಕಾರ ಜನರ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ ಎಂದರು.
ಇದನ್ನೂ ಓದಿ:
ವಿದೇಶ ಪ್ರವಾಸಗಳ ಕುರಿತು ಟೀಕೆ
ಪ್ರಧಾನಿ ಮೋದಿ ಜನರಿಗೆ ಮಿತವ್ಯಯದ ಪಾಠ ಹೇಳುತ್ತಾ ತಾವೇ ದುಬಾರಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ರಾಹುಲ್ ವ್ಯಂಗ್ಯವಾಡಿದರು. ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆ ಜನರಿಗೆ ಮತ್ತಷ್ಟು ಹೊರೆ ತರಬಹುದು ಎಂದು ಎಚ್ಚರಿಸಿದರು.
ರಾಜಕೀಯ ಕಾವು ಹೆಚ್ಚಿಸಿದ ಹೇಳಿಕೆ
ರಾಹುಲ್ ಗಾಂಧಿಯ ಈ ಹೇಳಿಕೆಗಳು ರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಬಿಜೆಪಿ ನಾಯಕರಿಂದಲೂ ಇದಕ್ಕೆ ತಿರುಗೇಟು ಬರುವ ಸಾಧ್ಯತೆ ಇದೆ.



